ಅನ್ ಲೋಡ್ ವೇಳೆ 40 ಅಡಿ ಎತ್ತರದಿಂದ ಕೆಳಗೆಬಿದ್ದ ಟಿಪ್ಪರ್ ➤ ಚಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಕಾರ್ಕಳ, ಆ. 03. ಟಿಪ್ಪರ್ ನಿಂದ ಸೈಜುಕಲ್ಲುಗಳನ್ನು ಅನ್ ಲೋಡ್ ಮಾಡುತ್ತಿದ್ದ ವೇಳೆ 40 ಅಡಿ ಎತ್ತರದಿಂದ ಕೆಳಗೆ ಮಗುಚಿ ಬಿದ್ದು, ಚಾಲಕ ಮೃತಪಟ್ಟ ಘಟನೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.


ಮೃತ ಚಾಲಕನನ್ನು ಆಸಿಫ್ ಎಂದು ಗುರುತಿಸಲಾಗಿದೆ. ಕಾರ್ಕಳ ತಾಲೂಕಿನ ಸೂಡ ಎಂಬಲ್ಲಿ ಸುರೇಶ್ ಶೆಟ್ಟಿ ಎಂಬವರ ಮಾಲಕತ್ವದ ಪ್ರಸ್ತುತ ಕೇರಳ ವಾಸಿ ಬಾಸಿತ್ ಎಂಬುವವರು ಲೀಸ್ ಗೆ ಪಡೆದುಕೊಂಡಿರುವ ಓಂ ಕ್ರಶರ್ ನಲ್ಲಿ ಟಿಪ್ಪರ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ಇವರು, ಎಂದಿನಂತೆ ಮಂಗಳವಾರದಂದು ಕಲ್ಲು ಕೋರೆಯಿಂದ ಸೈಜು ಕಲ್ಲುಗಳನ್ನು ಟಿಪ್ಪರ್ ನಲ್ಲಿ ತಂದು ಓಂ ಕ್ರಶರ್ ನಲ್ಲಿ ಅನ್ ಲೋಡ್ ಮಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆನ್ನಲಾಗಿದೆ. ತಕ್ಷಣವೇ ಚಾಲಕನನ್ನು ಚಿಕಿತ್ಸೆಗಾಗಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ವೈದ್ಯರು ಅದಗಾಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

Also Read  ಜಡ್ಜ್ ಮನೆಯಲ್ಲಿ ಕಳವು ಇಬ್ಬರು ಖದೀಮರು ಸೆರೆ

error: Content is protected !!
Scroll to Top