ಜಿರಳೆ, ತಿಗಣೆ ನಾಶಪಡಿಸಲು ಔಷಧ ಸಿಂಪಡಣೆ ➤ ಉಸಿರುಗಟ್ಟಿ ಬಾಲಕಿ ಮೃತ್ಯು

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 03. ಜಿರಳೆಯನ್ನು ನಾಶಪಡಿಸಲೆಂದು ಮನೆಯಲ್ಲಿ ಸಿಂಪಡಿಸಿದ್ದ ಔಷಧದಿಂದಾಗಿ ಆರು ವರ್ಷದ ಬಾಲಕಿ ಉಸಿರುಗಟ್ಟಿ ಮೃತಪಟ್ಟ ಘಟನೆ ವಸಂತನಗರದ ಮಾರಮ್ಮ ದೇವಸ್ಥಾನದ ಬಳಿ ನಡೆದಿದೆ.

ಮೃತ ಬಾಲಕಿಯನ್ನು ಅಹನಾ (6) ಎಂದು ಗುರುತಿಸಲಾಗಿದೆ. ಬಾಲಕಿಯ ಬಾಲಕಿಯ ತಂದೆ ವಿನೋದ್ ನಾಯರ್ ಹಾಗೂ ತಾಯಿಯೂ ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೂಲತಃ ಕೇರಳದವರಾದ ವಿನೋದ್ ನಾಯರ್ ಕುಟುಂಬವು ಸುಮಾರು 8 ವರ್ಷದಿಂದ ಬೆಂಗಳೂರಿನಲ್ಲಿ ನೆಲೆಸಿತ್ತು. ಇವರು ವಾಸವಾಗಿದ್ದ ಕಟ್ಟಡದ 4 ಮನೆಗಳಲ್ಲಿ ಜಿರಳೆ ಕಾಟವಿದೆಯೆಂದು ಮಾಲೀಕ ಶಿವಶಂಕರ್ ಔಷಧ ಸಿಂಪಡಿಸಿ, ಒಂದು ವಾರ ಮನೆಗಳನ್ನ ಖಾಲಿ ಬಿಡುವಂತೆ ಸೂಚಿಸಿದ್ದರು. ಅದರಂತೆ ತಾತ್ಕಾಲಿಕವಾಗಿ ಮನೆ ಖಾಲಿ ಮಾಡಿದ್ದ ಬಾಲಕಿಯ ಮನೆಯವರು, ಬಳಿಕ ಮಾಲಿಕನಿಗೆ ಹೇಳದೇ ನಾಲ್ಕೇ ದಿನದಲ್ಲಿ ಮನೆಗೆ ಮರಳಿದ್ದರು ಎಂದು ಮಾಲೀಕ ಶಿವಶಂಕರ್ ದೂರಿನಲ್ಲಿ ತಿಳಿಸಿದ್ದಾರೆ.

Also Read  OTS ಗಡುವು ಅಂತ್ಯ: BBMPಯಿಂದ ದಾಖಲೆಯ 4,284 ಕೋಟಿ ರೂ.ತೆರಿಗೆ ಸಂಗ್ರಹ

error: Content is protected !!
Scroll to Top