ಉಕ್ಕಿ ಹರಿಯುತ್ತಿರುವ ಪಯಸ್ವಿನಿ ➤ ಮಂಗಳೂರು- ಮೈಸೂರು ಹೆದ್ದಾರಿ ಬಂದ್..!!

(ನ್ಯೂಸ್ ಕಡಬ) newskadaba.com ಸುಳ್ಯ, ಆ. 03. ಭಾರಿ ಮಳೆಯಿಂದಾಗಿ ಸುಳ್ಯ ತಾಲ್ಲೂಕಿನಲ್ಲಿ ಪಯಸ್ವಿನಿ ನದಿ ಉಕ್ಕಿ ಹರಿಯುತ್ತಿದ್ದು, ಇದರಿಂದಾಗಿ ಮೈಸೂರು-ಮಂಗಳೂರು ಹೆದ್ದಾರಿ ಬಂದ್ ಆಗಿದೆ.

ಸುಳ್ಯ ತಾಲೂಕಿನ ಪೆರಾಜೆ ಹಾಗೂ ಆರಂಬೂರು ಬಳಿ ಹೆದ್ದಾರಿಯಲ್ಲಿ ಭಾರಿ‌ ಪ್ರಮಾಣದಲ್ಲಿ ನೀರು ನಿಂತಿರುವುದರಿಂದ ವಾಹನ ಸಂಚಾರ ಕೂಡಾ ಮುಂಜಾನೆ 3 ಗಂಟೆಯ ನಂತರ ಸ್ಥಗಿತಗೊಂಡಿದೆ‌. ಬಸ್ ನಲ್ಲಿ ಒಂಬತ್ತು ಮಂದಿ‌ ಪ್ರಯಾಣಿಕರಿದ್ದರು. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಸ್ಥಳೀಯರ ನೆರವಿನಿಂದ ಬೋಟನ್ನು ಬಸ್ ಬಳಿ ತೆಗೆದುಕೊಂಡು ಹೋಗಿ ಒಂಬತ್ತು ಪ್ರಯಾಣಿಕರನ್ನು‌ ಸುರಕ್ಷಿತವಾಗಿ ಎತ್ತರದ ಜಾಗಕ್ಕೆ ಕರೆದೊಯ್ದರು. ಆರು ಗಂಟೆಯ ಹೊತ್ತಿಗೆ ನೀರಿನ ಮಟ್ಟ ಕಡಿಮೆಯಾದ ಬಳಿಕ ಬಸ್, ಲಾರಿಗಳು ಸೇರಿದಂತೆ ದೊಡ್ಟ ವಾಹನಗಳು ಸಂಚಾರ ಆರಂಭಿಸಿದವು. ಎರಡು ಕಿ.ಮೀ ಮುಂದೆ ಆರಂಬೂರುಯಲ್ಲಿ ಹೆದ್ದಾರಿಯಲ್ಲಿ ನೀರು ಹರಿಯುತ್ತಿದ್ದು, ವಾಹನಗಳ ಓಡಾಟಕ್ಕೆ ತೊಂದರೆಯಾಗಿದೆ. ನದಿಯ ಬಳಿ ಇರುವ ಮನೆಯೊಂದು ಸಂಪೂರ್ಣ ಜಲಾವೃತವಾಗಿದೆ.

Also Read  ರಾಷ್ಟ್ರ ಮಟ್ಟದ ಅಥ್ಲೇಟಿಕ್ಸ್ ಮತ್ತು ಮಾಸ್ಟರ್ ಗೇಮ್ಸ್ ಕ್ರೀಡಾಕೂಟಕ್ಕೆಕಡಬದ ಮೋಹನ್ ಕೆರೆಕೋಡಿ ಆಯ್ಕೆ

error: Content is protected !!
Scroll to Top