ರೆಂಜಿಲಾಡಿ: ಭಾರೀ ಮಳೆಗೆ ಮನೆ ಜಲಾವೃತ ➤ ಏಳು ಮಂದಿಯ ರಕ್ಷಣೆ- ಸ್ಥಳಾಂತರ

(ನ್ಯೂಸ್ ಕಡಬ) newskadaba.com ಕಡಬ, ಆ. 03. ಎರಡು ದಿನಗಳಿಂದ ಎಡೆಬಿಡದೆ ಆರ್ಭಟಿಸುತ್ತಿರುವ ಮಹಾ ಮಳೆಗೆ ರೆಂಜಿಲಾಡಿ ಗ್ರಾಮ ಕುಬಲಾಡಿ ಎಂಬಲ್ಲಿ ಹಳ್ಳದ ನೀರು ಮನೆಗೆ ನುಗ್ಗಿ ಮನೆ ಜಲಾವೃತವಾದ ಘಟನೆ ವರದಿಯಾಗಿದೆ.

ವಿಷಯ ತಿಳಿದ ಕೂಡಲೇ ಸ್ಥಳೀಯಾಡಳಿತದ ಅಧಿಕಾರಿಗಳು ಹಾಗೂ ಎನ್.ಡಿ.ಆರ್.ಎಫ್ ತಂಡದವರು ಮಧ್ಯರಾತ್ರಿಯೇ ಸ್ಥಳಕ್ಕೆ ತೆರಳಿ ಮನೆಯಲ್ಲಿದ್ದ ತನಿಯಪ್ಪ (54), ಭಾಗೀರಥಿ (50), ಚಂದಪ್ಪ (41), ರೇವತಿ (34) ಅರುಣಾ (15)ಅನಿತಾ (9) ಅಂಜಲಿ (6) ಸೇರಿ ಒಟ್ಟು 7 ಜನರನ್ನು ರಕ್ಷಿಸಿದ್ದು ಸದ್ಯ ಅವರನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ. ರಕ್ಷಣಾ ಕಾರ್ಯದ ವೇಳೆ ಕಂದಾಯ ನಿರೀಕ್ಷಕರಾದ ಅವಿನ್ ರಂಗತ್ತಮಲೆ, ಗ್ರಾಮಕರಣಿಕ ಸಂತೋಷ್ ಹಾಗೂ ಗ್ರಾಮ ಪಂಚಾಯತ್ ಸದಸ್ಯ ವಸಂತ ಹಾಗೂ ಎನ್.ಡಿ.ಆರ್.ಎಫ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

Also Read  ಕಡಬ ತಾಲೂಕಿನಲ್ಲಿ ಒಂದೇ ದಿನ 101 ಮಂದಿಗೆ ಕೊರೋನಾ ಪಾಸಿಟಿವ್ ➤ ಪುತ್ತೂರು, ಸುಳ್ಯ ತಾಲೂಕುಗಳಲ್ಲಿ 188 ಪ್ರಕರಣ ಪತ್ತೆ

error: Content is protected !!
Scroll to Top