ಬೆಳ್ಳಾರೆ ಠಾಣಾ ನೂತನ ಎಸ್ಐ ಆಗಿ ಸುಹಾಸ್ ಅಧಿಕಾರ ಸ್ವೀಕಾರ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಆ. 02. ಬೆಳ್ಳಾರೆ ಠಾಣಾ ನೂತನ ಎಸ್.ಐ. ಆಗಿ ವರ್ಗಾವಣೆಯಾದ ಸುಹಾಸ್ ಅವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ನಾಯಕ ಪ್ರವೀಣ್ ನೆಟ್ಟಾರು ಅವರ ಪಾರ್ಥೀವ ಶರೀರದ ಮೆರವಣಿಗೆ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿರುವ ಆರೋಪದ ಹಿನ್ನೆಲೆ ಬೆಳ್ಳಾರೆ ಪೊಲೀಸ್ ಠಾಣಾ ಎಸ್.ಐ ರುಕ್ಮ ನಾಯ್ಕರವರನ್ನು ವರ್ಗಾವಣೆಗೊಳಿಸಲಾಗಿತ್ತು. ಇದೀಗ ಅವರಿಂದ ತೆರವಾದ ಸ್ಥಾನಕ್ಕೆ ಕುಂದಾಪುರದಿಂದ ವರ್ಗಾವಣೆಗೊಂಡ ಸುಹಾಸ್ ಆರ್. ಆಗಮಿಸಿ ಅಧಿಕಾರ ಸ್ವೀಕರಿಸಿದ್ದಾರೆ.

Also Read  ನಕಲಿ ಟಿಕೆಟ್ ಸೃಷ್ಟಿಸಿ ಚಾರಣಕ್ಕೆ ಅವಕಾಶ - ಅರಣ್ಯಾಧಿಕಾರಿ ಅಮಾನತು

error: Content is protected !!
Scroll to Top