ಕೊೖಲ: ಊರಿನ ಹಿರಿಯ ನಾಗರೀಕ ಐತ್ತಪ್ಪ ನಾಯ್ಕ ಅವರಿಗೆ ಸನ್ಮಾನ

(ನ್ಯೂಸ್ ಕಡಬ) newskadaba.com ಪುತ್ತೂರು, ನ.14. ಇಲ್ಲಿನ ಕೊೖಲ ಗ್ರಾಮದ ಏಣಿತಡ್ಕ-2 ಅಂಗನವಾಡಿ ಕೇಂದ್ರದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಇತ್ತೀಚೆಗೆ ನಡೆಯಿತು.

ಕಟ್ಟಡದ ಉದ್ಘಾಟನಾ ಸಮಾರಂಭಕ್ಕೆ ಶಾಸಕರಾದ ಎಸ್. ಅಂಗಾರ ಅವರು ಚಾಲನೆ ನೀಡಿ ಬಳಿಕ ಊರಿನ ಹಿರಿಯ ನಾಗರೀಕರಾದ ಐತ್ತಪ್ಪ ನಾಯ್ಕ ಅವರನ್ನು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಸರ್ವೋತ್ತಮ ಗೌಡ, ತಾಲೂಕು ಪಂಚಾಯಿತಿ ಸದಸ್ಯರಾದ ಜಯಂತಿ ಆರ್ ಗೌಡ, ತೇಜಸ್ವಿನಿ ಶೇಖರ ಗೌಡ, ಕೊೖಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಬೆಳಿಯಪ್ಪ ಗೌಡ, ಸದಸ್ಯರಾದ ಸುಂದರ ನಾಯ್ಕ, ತಿಮ್ಮಪ್ಪ ಗೌಡ, ಮೊದಲಾದವರು ಉಪಸ್ಥಿತರಿದ್ದರು.

Scroll to Top