ಅಲ್ಪಸಂಖ್ಯಾತರ ಶಿಕ್ಷಣಕ್ಕಾಗಿ ಮೀಸಲಿಟ್ಟ ಭೂಮಿಯನ್ನು ಹಿಂದೂ ರಾಷ್ಟ್ರೋತ್ತಾನ ಪರಿಷತ್‌ಗೆ ನೀಡಲು ಯತ್ನಿಸುತ್ತಿರುವ ಸರ್ಕಾರ ➤ ಕ್ಯಾಂಪಸ್ ಫ್ರಂಟ್ ಆಕ್ರೋಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 02. ರಾಜ್ಯದ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಹೆಸರಿನಲ್ಲಿರುವ 5ಎಕರೆ ಜಮೀನನ್ನು ಹಿಂದೂ ರಾಷ್ಟ್ರೋತ್ತಾನ ಪರಿಷತ್‌ಗೆ ಮಂಜೂರು ಮಾಡಲು ಹೊರಟಿರುವ ಬಿಜೆಪಿ ಸರ್ಕಾರದ ನಡೆಯ ವಿರುದ್ಧ ಕ್ಯಾಂಪಸ್ ಫ್ರಂಟ್ ಆಕ್ರೋಶ ವ್ಯಕ್ತಪಡಿಸಿದೆ.

ರಾಜ್ಯವನ್ನು ಸಂಘಪರಿವಾರದ ಕೈಗೆ ಕೊಡಲು ರಾಜ್ಯ ಸರ್ಕಾರ ತುದಿಗಾಲಲ್ಲಿ ನಿಂತಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿರುವ ಶಿಕ್ಷಣಕ್ಕಾಗಿ ಮೀಸಲಿಟ್ಟ ಜಮೀನನ್ನು ಆರೆಸ್ಸೆಸ್‌ನ ಅಂಗ ಸಂಸ್ಥೆಗಳಿಗೆ ಮಂಜೂರು ಮಾಡಲು ಹೊರಟಿರುವ ರಾಜ್ಯದ ಜನತೆಗೆ ಮಾಡಿರುವ ದ್ರೋಹವಾಗಿದೆ. ಸದಾ ದೊಂಬಿ, ಗಲಭೆ, ಗಲಾಟೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಬಿಜೆಪಿಯ ಮಾತೃಸಂಸ್ಥೆ ಸಂಘಪರಿವಾರಕ್ಕೆ ಮಂಜೂರು ಮಾಡಲು ಹೊರಡುವ ಮೂಲಕ ಸರ್ಕಾರಿ ಪ್ರಾಯೋಜಿತವಾಗಿ ರಾಜ್ಯದ ಶಾಂತಿ ನೆಮ್ಮದಿಗೆ ಭಂಗವುಂಟು ಮಾಡಲು ಹೊರಟಿದ್ದಾರೆ, ಸಚಿವ ಸಂಪುಟಕ್ಕೆ ಸಂಘಪರಿವಾರದ ಮೇಲೆ ಪ್ರೇಮ ಅಷ್ಟೊಂದಿದ್ದರೆ ಮುಖ್ಯಮಂತ್ರಿ ಮತ್ತು ಸಚಿವರ ಸೊತ್ತಿನಿಂದ ಸಂಘಪರಿವಾರದ ಕಚೇರಿ ನಿರ್ಮಾಣಕ್ಕೆ ಜಮೀನು ನೀಡಲಿ ಹೊರತು ರಾಜ್ಯದ ಸರ್ಕಾರಿ ಸೊತ್ತಿನಿಂದಲ್ಲ. ಅಲ್ಪಸಂಖ್ಯಾತರ ಅಭಿವೃದ್ಧಿ ವಿಚಾರದಲ್ಲಿ ಸದಾ ಅಸಡ್ಡೆ ಧೋರಣೆ ತಾಳುವ ಬೊಮ್ಮಾಯಿ ಸರ್ಕಾರ ಇದೀಗ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿದ್ದ ಹಲವಾರು ಯೋಜನೆಗಳನ್ನು ನಿಲ್ಲಿಸಿ ಇದೀಗ ಮತ್ತೆ ಅಲ್ಪಸಂಖ್ಯಾತರಿಗೆ ಮೀಸಲಾಗಿರುವ ಭೂಮಿಯನ್ನೇ ಅಲ್ಪಸಂಖ್ಯಾತರ ವಿರುದ್ಧ ಸದಾ ಧ್ವೇಷ ಕಾರುವ ಸಂಘಪರಿವಾರದ ಅಂಗಸಂಸ್ಥೆಯಾದ ಹಿಂದೂ ರಾಷ್ಟ್ರೋತ್ತಾನ ಪರಿಷತ್‌ಗೆ ನೀಡಲು ಹೊರಟಿರುವುದು ಅಲ್ಪಸಂಖ್ಯಾತರ ಮೇಲೆ ಸರ್ಕಾರ ಮಾಡುತ್ತಿರುವ ದಬ್ಬಾಳಿಕೆಯಾಗಿದೆ.

Also Read  ಶಾಂತಿ ಕದಡುವವರ ವಿರುದ್ಧ ಗೂಂಡಾ ಕಾಯ್ದೆ ಹಾಕಿ ಗಡೀಪಾರು ಮಾಡಿ ► ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ

ಸರ್ಕಾರಿ ಜಮೀನನ್ನು ತಮ್ಮ ಪ್ರಾಯೋಜಕತೆಯ ಖಾಸಗಿ ಸಂಸ್ಥೆಗೆ ನೀಡುತ್ತಿರುವುದು ಸ್ಪಷ್ಟವಾದ ಭ್ರಷ್ಟಾಚಾರವಾಗಿದೆ. ಅಧಿಕಾರ ದುರುಪಯೋಗಪಡಿಸಿಕೊಂಡು ಸರ್ಕಾರಿ ಜಮೀನು ಕಬಳಿಸುವ ಯತ್ನಗಳು ಸಂವಿಧಾನ ವಿರೋಧಿ ಕೃತ್ಯವಾಗಿದೆ, ಇದರ ವಿರುದ್ಧ ಕ್ಯಾಂಪಸ್ ಫ್ರಂಟ್ ಬೀದಿಗಿಳಿದು ಹೋರಾಟ ಮಾಡಲಿದೆ ಎಂದು ಎಚ್ಚರಿಕೆಯನ್ನು ನೀಡುತ್ತಾ ಈ ನಿರ್ಧಾರವನ್ನು ರಾಜ್ಯ ಸರ್ಕಾರ ತಕ್ಷಣ ಹಿಂಪಡೆಯಬೇಕೆಂದು ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷರಾದ ಅಥಾವುಲ್ಲ ಪುಂಜಾಲಕಟ್ಟೆ ಆಗ್ರಹಿಸಿದ್ದಾರೆ.

Also Read  ಜುಗಾರಿ ಅಡ್ಡೆಗೆ ದಾಳಿ ➤ ಹನ್ನೊಂದು ಆರೋಪಿಗಳ ಸಹಿತ ಆರು ವಾಹನಗಳು ಪೊಲೀಸ್ ವಶಕ್ಕೆ

error: Content is protected !!
Scroll to Top