ಮಹಾಮಳೆಗೆ ಕರಾವಳಿಯ ಸುಬ್ರಹ್ಮಣ್ಯ, ಸುಳ್ಯ ತತ್ತರ..!! ➤ ಮುರಿದುಬಿದ್ದ ಸಂಪರ್ಕ ಸೇತುವೆ- ಕಲ್ಲುಗುಂಡಿ ಸಂಪೂರ್ಣ ಜಲಾವೃತ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಆ. 02. ಕಳೆದ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಗೆ ಸುಳ್ಯದ ಕಲ್ಮಕಾರು, ಕೊಲ್ಲಮೊಗ್ರು, ಹರಿಹರ ಪಲ್ಲತ್ತಡ್ಕ, ಕಡಬ ತಾಲೂಕಿನ ಸುಬ್ರಹ್ಮಣ್ಯ ತತ್ತರಿಸಿದ್ದು, ಕಲ್ಮಕಾರಿನ ಪೇಟೆಯ ಬಳಿಯಿರುವ ಸಂತಡ್ಕ ಬೈಲು, ಗುಳಿಕಾನ ಸೇರಿದಂತೆ ಹಲವು ಪ್ರದೇಶಗಳ ಸುಮಾರು 150 ಕ್ಕೂ ಹೆಚ್ಚಿನ ಮನೆಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮುರಿದುಬಿದ್ದು ಅಲ್ಲಿನ ಮನೆಗಳ ಸಂಪರ್ಕ ಕಡಿತಗೊಂಡಿದೆ.

ರವಿವಾರದಂದು ಸೇತುವೆಗೆ ಹಾನಿಯಾಗಿತ್ತು ಆದರೆ, ಸೋಮವಾರದಂದು ತಡರಾತ್ರಿ ಸೇತುವೆ ಮುರಿದುಬಿದ್ದು ಸಂಪರ್ಕ ಕಡಿತವಾಗಿದೆ. ಇನ್ನು ಕಲ್ಲುಗುಂಡಿಯಲ್ಲಿ ಪಯಸ್ವಿನಿ‌ ನದಿ ಉಕ್ಕಿ ಹರಿದು ಕಲ್ಲಗುಂಡಿ ಪೇಟೆ, ಸುತ್ತಮುತ್ತಲಿನ ಪ್ರದೇಶಗಳು ಜಲಾವೃತಗೊಂಡಿದೆ. ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳಿಸುವ ಪ್ರಕ್ರಿಯೆಯನ್ನೂ ಮಾಡಲಾಗುತ್ತಿದೆ.

Also Read  ಸ್ಕೂಟರ್ ಗೆ ಕಂಟೈನರ್ ಢಿಕ್ಕಿ- ಸಹಸವಾರೆ ಮೃತ್ಯು..!

error: Content is protected !!
Scroll to Top