ಮನೆಯಲ್ಲೇ ಗಾಂಜಾ ಗಿಡ ಬೆಳೆದ ಮಂಗಳೂರಿನ ಕಾಲೇಜು ವಿದ್ಯಾರ್ಥಿ ಅಂದರ್

(ನ್ಯೂಸ್ ಕಡಬ) newskadaba.com ಕಾಸರಗೋಡು, ಆ. 01. ಮನೆಯ ಟೆರೇಸ್ ನಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.


ಬಂಧಿತರನ್ನು ಬೇಕೂರು ಕನ್ನಡಿ ಪಾರೆಯ ನಜೀಬ್ ಮೆಹಫೂಝ್ (22) ಎಂದು ಗುರುತಿಸಲಾಗಿದೆ. ಕಿದೂರಿನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಈತ ಮನೆಯ ಟೆರೇಸ್ ನಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದನು. ಈತ ಸ್ವಂತ ಬಳಕೆಗೆ ಅಲ್ಲದೇ ಮಾರಾಟಕ್ಕಾಗಿಯೂ ಗಾಂಜಾ ಗಿಡಗಳನ್ನು ಬೆಳೆಸಿದ್ದ ಎಂದು ತನಿಖೆಯ ವೇಳೆ ತಿಳಿದು ಬಂದಿದೆ. ಮಂಗಳೂರಿನ ಕಾಲೇಜೊಂದರಲ್ಲಿ ಕಲಿಯುತ್ತಿದ್ದ ಈತ ಅಲ್ಲಿಂದಲೇ ಗಾಂಜಾ ಗಿಡದ ಬೀಜಗಳನ್ನು ಸಂಗ್ರಹಿಸಿರಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Also Read  ಕಡಬ: ಚಾರ್ವಾಕದ ಕುಮಾರಧಾರ ನದಿಯಲ್ಲಿ ಅಕ್ರಮ ಮರಳುಗಾರಿಕೆ- ಗ್ರಾಮಸ್ಥರ ಆಕ್ರೋಶ

error: Content is protected !!
Scroll to Top