ದ.ಕ ಪ್ರವೇಶ ನಿಷೇಧದ ಹಿನ್ನೆಲೆ ➤ ರಸ್ತೆಯಲ್ಲೇ ಪ್ರತಿಭಟನೆ ಮಾಡಿ ಹಿಂತಿರುಗಿದ ಪ್ರಮೋದ್ ಮುತಾಲಿಕ್

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 29. ನಿಷೇಧದ ನಡುವೆಯೂ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸಲು ಯತ್ನಿಸಿದ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರನ್ನು ಹೆಜಮಾಡಿಯಲ್ಲಿ ಪೊಲೀಸರು ತಡೆ ಹಿಡಿದ ಘಟನೆ ನಡೆದಿದೆ.

 

ಈ ಕುರಿತು ಪ್ರತಿಕ್ರಿಯಿಸಿದ ಮುತಾಲಿಕ್, ಪ್ರವೀಣ್ ಮನೆಗೆ ಹೋಗುವ ವೇಳೆ ಪೊಲೀಸರು ನನ್ನನ್ಮು ಹೆಜಮಾಡಿಯಲ್ಲಿ ತಡೆದು ದ.ಕ. ಜಿಲ್ಲಾಧಿಕಾರಿ ಕೊಟ್ಟ ನಿಷೇದಾಜ್ಞೆ ಪತ್ರವನ್ನು ಕೊಟ್ಟಿದ್ದಾರೆ. ನೀವು ಮುತಾಲಿಕ್‌ನ ಬ್ಯಾನ್ ಮಾಡುತ್ತಿಲ್ಲ, ಹಿಂದುತ್ವವನ್ನು ಬ್ಯಾನ್ ಮಾಡುತ್ತಿದ್ದೀರ. ನನ್ನನ್ನು ಹಿಂದೂ ವಿರೋಧಿ ಪಕ್ಷ ಕಾಂಗ್ರೆಸ್ ಬ್ಯಾನ್ ಮಾಡಿದ್ದರೆ ಒಪ್ಪಬಹುದಿತ್ತು. ರಾಜ್ಯದ ಬಿಜೆಪಿ ನಾಯಕರು ಹಿಂದೂ ವಿರೋಧಿಗಳು ಎಂದು ವಾಗ್ದಾಳಿ ನಡೆಸಿದ್ದಾರೆ. ಇನ್ನು ಪ್ರಚೋದನಕಾರಿ ಭಾಷಣದಿಂದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟಾಗಬಹುದು ಎಂಬ ಕಾರಣದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಮೋದ್ ಮುತಾಲಿಕ್ ಅವರ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ಅವರು ಆದೇಶ ಹೊರಡಿಸಿದ್ದರು.

Also Read  ಅಡ್ಡಹೊಳೆಯಿಂದ ಸಂಪಾಜೆಗೆ ಆಗಮಿಸಿದರೇ ನಕ್ಸಲರು...? ► ಕಾಡು ಪ್ರದೇಶದ ಎರಡು ಮನೆಗಳಿಗೆ ಭೇಟಿ ನೀಡಿದ ಮೂವರ ತಂಡ

error: Content is protected !!
Scroll to Top