ಪ್ರವೀಣ್ ಹತ್ಯೆಯ ಬೆನ್ನಲ್ಲೇ ಇಬ್ಬರು ಸಬ್ ಇನ್ಸ್‌ಪೆಕ್ಟರ್ ಗಳ ತಲೆದಂಡ ➤ ಬೆಳ್ಳಾರೆ ಠಾಣಾ ಎಸ್ಐ ಆಗಿ ಸುಹಾಸ್ ಹಾಗೂ ಸುಬ್ರಹ್ಮಣ್ಯ ಠಾಣಾ ಎಸ್ಐ ಮಂಜುನಾಥ್ ನೇಮಕ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 29. ವಿಟ್ಲ, ಬೆಳ್ಳಾರೆ ಮತ್ತು ಸುಬ್ರಹ್ಮಣ್ಯ ಠಾಣೆಯ ಪಿ.ಎಸ್.ಐ ಗಳನ್ನು ದಿಢೀರ್ ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.

ವಿಟ್ಲ ಠಾಣೆಯ ಪಿಎಸ್ ಐ ಮಂಜುನಾಥ್ ರವರನ್ನು ಸುಬ್ರಹ್ಮಣ್ಯ ಠಾಣೆಗೆ, ಕುಂದಾಪುರ ಗ್ರಾಮಾಂತರ ಠಾಣೆಯ ಪಿಎಸ್ ಐ ಸುಹಾಸ್ ಆರ್. ರವರನ್ನು ಬೆಳ್ಳಾರೆ ಠಾಣೆಗೆ ವರ್ಗಾವಣೆಗೊಳಿಸಿ ಪೊಲೀಸ್ ಮಹಾ ನಿರೀಕ್ಷಕರಾದ ದೇವಜ್ಯೋತಿ ರೇ ರವರು ಆದೇಶ ನೀಡಿದ್ದಾರೆ. ಪ್ರವೀಣ್ ರವರ ಪಾರ್ಥಿವ ಶರೀರದ ಮೆರವಣಿಗೆ ವೇಳೆ ಅಂತಿಮ ನಮನ ಸಲ್ಲಿಸಲು ಬಂದಿದ್ದ ಆರ್.ಎಸ್.ಎಸ್. ನ ಹಿರಿಯ ಕಾರ್ಯಕರ್ತರೊಬ್ಬರ ಮೇಲೆ ಪೊಲೀಸರು ಲಾಠಿ ಏಟು ನೀಡಿದ ಹಿನ್ನೆಲೆ ಬೆಳ್ಳಾರೆ, ಸುಬ್ರಹ್ಮಣ್ಯ ಠಾಣೆಯ ಎಸ್.ಐ ಮತ್ತು ಇತರ ಪೊಲೀಸರನ್ನು ಅಮಾನತುಗೊಳಿಸಬೇಕೆಂದು ಕೂಗು ಕೇಳಿ ಬಂದಿತ್ತು. ಈ ಹಿನ್ನೆಲೆ ಅವರನ್ನು ವರ್ಗಾವಣೆಗೊಳಿಸಿ ಅವರ ಸ್ಥಾನಕ್ಕೆ ಇತರ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎನ್ನುವ ಮಾಹಿತಿ ಕೇಳಿಬರುತ್ತಿದೆ.

Also Read  ದೇಶದಲ್ಲಿ ದಿನಬಳಕೆಯ ವಸ್ತುಗಳು, ಔಷಧಿಗಳು ಕೈಗೆಟುಕುವ ದರದಲ್ಲಿದೆ ► ಪೆಟ್ರೋಲ್ ಬೆಲೆಯೇರಿಕೆ ವಿರುದ್ಧ 'ಭಾರತ ಬಂದ್' ಹಾಸ್ಯಾಸ್ಪದ: ಕೃಷ್ಣ ಶೆಟ್ಟಿ ಕಡಬ

 

error: Content is protected !!
Scroll to Top