ದುಷ್ಕರ್ಮಿಗಳಿಂದ ಹತ್ಯೆಗೀಡಾದ ಫಾಝಿಲ್ ➤ ಮನೆಗೆ ತಲುಪಿದ ಮೃತದೇಹ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.29. ಮಂಗಳೂರಿನ ಹೊರವಲಯದ ಸುರತ್ಕಲ್ ನಲ್ಲಿ ರಾತ್ರಿ ವೇಳೆ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಫಾಝಿಲ್ ಮೃತದೇಹವನ್ನು ಯುವಕನ ಮಂಗಲಪೇಟೆಯ ಮನೆಗೆ ತರಲಾಯಿತು.

ಸುರತ್ಕಲ್ ನಲ್ಲಿ ಗುರುವಾರ ರಾತ್ರಿ ಫಾಝಿಲ್ ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿದ ಪರಿಣಾಮ ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಫಾಝಿಲ್ ಮೃತಪಟ್ಟಿದ್ದನು. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಿಕರಿಗೆ ಹಸ್ತಾಂತರಿಸಲಾಗಿದ್ದು, ಪೊಲೀಸ್ ರಕ್ಷಣೆಯಲ್ಲಿ ಮೃತದೇಹವನ್ನು ಆತನ ಮನೆಗೆ ತರಲಾಗಿದೆ.

Also Read  ಕೋಡಿಂಬಾಳ ಸೈಂಟ್ ಜಾರ್ಜ್ ಚರ್ಚಿನ ಆಡಳಿತ ಸಮಿತಿ ರಚನೆ ➤ ಟ್ರಸ್ಟಿಯಾಗಿ ಸಂದೀಪ್ ಬಳ್ಳಿಕಜೆ ಆಯ್ಕೆ

 

error: Content is protected !!
Scroll to Top