ಕಡಬ: ಕಾಡಾನೆ ಹಿಂಡು ದಾಳಿ ➤ ಅಡಿಕೆ ಗಿಡ, ಜೇನು ಕೃಷಿ ಸೇರಿದಂತೆ ದ್ವಿಚಕ್ರ ವಾಹನ ಧ್ವಂಸ

(ನ್ಯೂಸ್ ಕಡಬ) newskadaba.com ಕಡಬ, ಜು.29. ಕಾಡಾನೆ ಹಿಂಡೊಂದು ಅಡಿಕೆ ತೋಟಕ್ಕೆ ನುಗ್ಗಿ ಅಡಿಕೆ ಮರ ಹಾಗೂ ಜೇನು ಕೃಷಿಯ ಜೊತೆ ನಿಲ್ಲಿಸಲಾಗಿದ್ದ ಸ್ಕೂಟರ್ ಗೆ ಹಾನಿ ಮಾಡಿರುವ ಘಟನೆ ನೂಜಿಬಾಳ್ತಿಲ ಗ್ರಾಮದ ಅಡೆಂಜ ಭಾಗದಲ್ಲಿ ನಡೆದಿದೆ.

ಅಡೆಂಜ ನಿವಾಸಿ ಲಕ್ಷ್ಮಣ ಪೆತ್ತಲ ಹಾಗೂ ಸುಂದರ ಪೆತ್ತಲ ಎಂಬವರಿಗೆ ಸೇರಿದ 25 ಕ್ಕೂ ಹೆಚ್ಚಿನ ಅಡಿಕೆ ಗಿಡ, ಜಯಪ್ರಕಾಶ್ ಪೆತ್ತಲ ಎಂಬವರಿಗೆ ಸೇರಿದ 14 ಜೇನು ಪೆಟ್ಟಿಗೆ ಹಾಗೂ ಕಿಶೋರ್ ಪಾದೆ ಎಂಬವರಿಗೆ ಸೇರಿದ ಸ್ಕೂಟರನ್ನು ಕಾಡಾನೆ ಹಿಂಡು ಹಾನಿಗೊಳಿಸಿದೆ. ಕಾಡಾನೆ ದಾಳಿಯಿಂದಾಗಿ ಪರಿಸರದ ಜನತೆ ಭಯದ ವಾತಾವರಣದಲ್ಲಿ ಬದುಕುವಂತಾಗಿದೆ.

Also Read  ’ಪ್ರಚೋದನೆ, ದಂಗೆ ಮಾಡಿಸುವುದು ಸಂಘಪರಿವಾದ ತರಬೇತಿಯಾಗಿದೆ’  ಸಚಿವ ದಿನೇಶ್ ಗುಂಡೂರಾವ್                                    

 

error: Content is protected !!
Scroll to Top