(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜು.28. ಪ್ರವೀಣ್ ಹತ್ಯೆಗೆ ಸಂಬಂಧಿಸಿದಂತೆ ಯತೀಶ್ ಎಂಬಾತನನ್ನು ಬಂಧಿಸಲಾಗಿದೆ ಎಂದು ವೆಬ್‌ಸೈಟ್ ಒಂದರ ಹೆಡ್ ಲೈನ್ ತಿರುಚಿ ಸುಳ್ಳು ಸುದ್ದಿಯನ್ನು ವೈರಲ್ ಮಾಡಲಾಗುತ್ತಿದ್ದು, ಯತೀಶ್ ಎಂಬ ಹೆಸರಿನ ಯಾರನ್ನೂ ಬಂಧಿಸಲಾಗಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.
‘ಹೊಸಕನ್ನಡ’ ವೆಬ್‌ಸೈಟ್ ನಲ್ಲಿ ಬಂದಿದ್ದ ‘ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಬೆಳ್ಳಾರೆ ನಿವಾಸಿ ಬಂಧನ’ ಎಂಬ ಹೆಡ್ ಲೈನನ್ನು ತಿರುಚಿ ‘ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಪ್ರಮುಖ ಆರೋಪಿ ಬೆಳ್ಳಾರೆ ನಿವಾಸಿ ಯತೀಶ್ ಬಂಧನ’ ಎಂದು ಬರೆದು ಯಾರೋ ಕಿಡಿಗೇಡಿಗಳು ಸುಳ್ಳು ಸುದ್ದಿಯನ್ನು ವೈರಲ್ ಮಾಡಿದ್ದಾರೆ. ಈ ಬಗ್ಗೆ ಹೊಸಕನ್ನಡ ವೆಬ್‌ಸೈಟ್ ತಂಡದವರು ಪೊಲೀಸರಿಗೆ ದೂರು ನೀಡಿದ್ದಾರೆ.