ಅರಂತೋಡು: ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಕಾರ್ಯಕ್ರಮ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಅರಂತೋಡು, ಜು. 28. ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನ 8ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಕಾರ್ಯಕ್ರಮ ಅಂಗವಾಗಿ ಭವಿಷ್ಯದ ಮಕ್ಕಳು ಮಾನಸಿಕ ಮತ್ತು ದೈಹಿಕ ಆರೋಗ್ಯದಿಂದ ಕೂಡಿರಬೇಕೆಂದು ಸರ್ಕಾರವು ಮಕ್ಕಳ ಪೋಷಣೆಗಾಗಿ ನೀಡುವ ಬಿಸಿಯೂಟ, ಹಾಲು, ಮೊಟ್ಟೆ , ಹಣ್ಣು ಹಂಪಲು ಹಾಗೂ ಶೇಂಗಾ ಚಿಕ್ಕಿ ಮೊದಲಾದವುಗಳ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಸದುದ್ದೇಶದಿಂದ ನೀಡುವ ಯೋಜನೆಯನ್ನು ವಿದ್ಯಾರ್ಥಿಗಳು ಬಳಸಿಕೊಂಡು ಉತ್ತಮ ಗುಣಮಟ್ಟದ ವಿದ್ಯಾರ್ಥಿಗಳಾಗಿ ರೂಪುಗೊಳ್ಳಲಿ ಎಂದು ಕಾಲೇಜಿನ ಸಂಚಾಲಕರಾದ ಶ್ರೀ ಕೆ ಆರ್ ಗಂಗಾಧರ್ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಅರಂತೋಡು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಮಾಲಿನಿ ಉಳುವಾರು ವಿದ್ಯಾರ್ಥಿಗಳಿಗೆ ಮೊಟ್ಟೆ ಹಾಗೂ ಹಣ್ಣು ಹಂಪಲು ವಿತರಿಸಿದರು. ಶಾಲಾ ಮುಖ್ಯ ಗುರುಗಳಾದ ಶ್ರೀ ಸೀತಾರಾಮ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಕಾಲೇಜಿನ ಬಿಸಿಯೂಟ ನಿರ್ವಹಣೆಯ ಮುಖ್ಯಸ್ಥರಾದ ಶ್ರೀ ಸೊಮಶೇಖರ ಪಿಂಡಿಮನೆ, ಶಿಕ್ಷಕರಾದ ಮನೋಜ್, ಮಮತಾ, ಅಶ್ವಿನಿ, ಉಪನ್ಯಾಸಕರಾದ ಸುರೇಶ್ ವಾಗ್ಲೆ, ಮೋಹನ್ ಚಂದ್ರ, ಅಡುಗೆ ಸಿಬ್ಬಂದಿಗಳು ಮೊದಲಾದವರು ಉಪಸ್ಥಿತರಿದ್ದರು.

Also Read  ಈ 4 ರಾಶಿಯವರಿಗೆ ಸಂಕಷ್ಟ ಎದುರಾಗಲಿದೆ ದಾಂಪತ್ಯ ಜೀವನದಲ್ಲಿ ಕಲಹವುಂಟಾಗುತ್ತದೆ

error: Content is protected !!
Scroll to Top