ಅಂತಿಮ ನಮನಕ್ಕೆ ಬಂದ ಆರ್ ಎಸ್ಎಸ್ ಕಾರ್ಯಕರ್ತನಿಗೆ ಲಾಠಿ ಚಾರ್ಜ್ ಹಿನ್ನೆಲೆ ➤ ಎಸ್ಐ ಸೇರಿದಂತೆ ಹಲವು ಪೊಲೀಸರ ಅಮಾನತಿಗೆ ಹಿಂಜಾವೇ ಆಗ್ರಹ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜು. 27. ಬಿಜೆಪಿಯ ಜಿಲ್ಲಾ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆಯ ವಿಷಯ ತಿಳಿದು ಅಂತಿಮ ನಮನ ಸಲ್ಲಿಸಲೆಂದು ಕಾಸರಗೋಡಿನಿಂದ ಆಗಮಿಸಿದ್ದ ಆರೆಸ್ಸೆಸ್ ಹಿರಿಯ ಕಾರ್ಯಕರ್ತ ಪಿ. ರಮೇಶ್ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಲಾಠಿ ಬೀಸಿದ ಪೊಲೀಸರ ಅಮಾನತಿಗೆ ಹಿಂಜಾವೇ ಆಗ್ರಹಿಸಿದೆ.

ಪೊಲೀಸರ ಈ ಕೃತ್ಯವನ್ನು ಹಿಂದೂ ಜಾಗರಣ ವೇದಿಕೆ ತೀವ್ರವಾಗಿ ಖಂಡಿಸಿದ್ದು, ಅವರ ಮೇಲೆ ಲಾಠಿಯಿಂದ ಹಲ್ಲೆ ಮಾಡಿದ ಪೊಲೀಸರನ್ನು ಅಮಾನತುಗೊಳಿಸುವಂತೆ ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲೆ ಆಗ್ರಹಿಸಿದೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದೆ.

Also Read  ಅ.22: ಮುಖ್ಯಮಂತ್ರಿ ಸಿದ್ದರಾಮಯ್ಯ ಬಂಟ್ವಾಳಕ್ಕೆ ► ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ

error: Content is protected !!
Scroll to Top