ನಾಳೆ (ಜು. 28) ದ.ಕ ಜಿಲ್ಲೆಯಲ್ಲಿ ಯಾವುದೇ ಬಂದ್ ಗೆ ಕರೆ ಕೊಟ್ಟಿಲ್ಲ ➤ ಹಿಂಜಾವೇ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಪುತ್ತೂರು, ಜು. 27. ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆಯ ಬಳಿಕ ದ.ಕ. ಜಿಲ್ಲೆಯಲ್ಲಿ ವಿವಿಧ ರೀತಿಯ ಪ್ರಸಂಗಗಳು ನಡೆಯುತ್ತಿದ್ದು, ಈ ನಡುವೆ ದ.ಕ. ಜಿಲ್ಲಾ ಬಂದ್ ಕರೆ ನೀಡಲಾಗಿದೆ ಎನ್ನುವ ಸುದ್ದಿಯೊಂದು ಹರಿದಾಡಲಾರಂಭಿಸಿದೆ. ಆದರೆ, ಇದು ಸುಳ್ಳು ಎಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಸ್ಪಷ್ಟಪಡಿಸಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಗುರುವಾರದಂದು ದ.ಕ. ಜಿಲ್ಲೆ ಬಂದ್ ಗೆ ವಿಹೆಚ್ ಪಿ ಬಜರಂಗ ದಳ ಕರೆ ನೀಡಿದೆ ಎನ್ನುವ ವಿಚಾರವೊಂದು ಹರಿದಾಡುತ್ತಿದ್ದು, ಜುಲೈ 28ರಂದು ಜಿಲ್ಲೆಯಲ್ಲಿ ಯಾವುದೇ ರೀತಿಯ ಬಂದ್ ಗೆ ಯಾವುದೇ ಹಿಂದೂ ಸಂಘಟನೆಗಳು ಕರೆಕೊಟ್ಟಿಲ್ಲ ಎಂದು ಹಿಹೆಚ್ ಪಿ, ಬಜರಂಗದಳ, ಹಿಂದೂ ಜಾಗರಣ ವೇದಿಕೆ ಸ್ಪಷ್ಟಪಡಿಸಿದೆ.

Also Read  ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಗೃಹ ಸಚಿವರ ಭೇಟಿ

error: Content is protected !!
Scroll to Top