ಬೆಳ್ಳಾರೆ: ಮೃತದೇಹದ ಮೆರವಣಿಗೆ ವೇಳೆ ಮಸೀದಿಗೆ ಕಲ್ಲೆಸೆದ ಆಕ್ರೋಶಿತ ಗುಂಪು ➤ ಲಾಠಿ ಚಾರ್ಜ್ ಮಾಡಿ ಗುಂಪನ್ನು ಚದುರಿಸಿದ ಪೊಲೀಸರು

ಫೋಟೊ ಕೃಪೆ: tv9

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜು.27. ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಮೃತದೇಹದ ಮೆರವಣಿಗೆ ವೇಳೆ ಆಕ್ರೋಶಿತ ಗುಂಪು ಬೆಳ್ಳಾರೆ ಮಸೀದಿಗೆ ಕಲ್ಲೆಸೆದ ವೀಡಿಯೋ ವೈರಲ್ ಆಗಿದೆ.

ಬೆಳ್ಳಾರೆ ಜಂಕ್ಷನ್ ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹಾಗೂ ವಿವಿಧ ಜನಪ್ರತಿನಿಧಿಗಳ ಕಾರನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದ ಗುಂಪು ಪಕ್ಕದಲ್ಲಿದ್ದ ಮಸೀದಿಗೆ ಕಲ್ಲೆಸೆದಿದ್ದಾರೆ. ಅಲ್ಲದೆ ಹೋಟೆಲ್, ಫ್ಯಾನ್ಸಿಗೆ ಕಲ್ಲೆಸೆದಿದ್ದು, ಮುಂಭಾಗದ ಗಾಜಿನ ಕಪಾಟಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ. ಪರಿಸ್ಥಿತಿ ಕೈ ಮೀರುವುದನ್ನು ಅರಿತ ಪೊಲೀಸರು ಯದ್ವಾತದ್ವಾ ಲಾಠಿಚಾರ್ಜ್ ನಡೆಸಿದ್ದರಿಂದ ಪರಿಸ್ಥಿತಿ ಹತೋಟಿಗೆ ಬಂದಿದೆ. ಪ್ರವೀಣ್ ಕುಟುಂಬಸ್ಥರು ಪುತ್ತೂರಿನಿಂದ ಮೆರವಣಿಗೆ ಆರಂಭವಾಗುವುದಕ್ಕಿಂತ ಮೊದಲೇ ಶಾಂತಿ ಕಾಪಾಡುವಂತೆ ಹಿಂದೂ ಪರ ಸಂಘಟನೆಯ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದರು.

Also Read  ಅಕ್ರಮ ಮರಳು ಸಾಗಾಟ ಪ್ರಕರಣ➤ ಆರೋಪಿ ಸೆರೆ

 

error: Content is protected !!
Scroll to Top