ಮಗನ ಚಿತೆಗೆ ತಂದೆಯಿಂದಲೇ ಅಗ್ನಿಸ್ಪರ್ಶ. ➤ ಮುಗಿಲುಮುಟ್ಟಿದ ಕುಟುಂಬಸ್ಥರ ಆಕ್ರಂದನ..!

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜು. 27. ಬೆಳ್ಳಾರೆಯಲ್ಲಿ ಹತ್ಯೆಗೀಡಾದ ಹಿಂದೂ ಯುವ ಬಿಜೆಪಿ ನಾಯಕ ಪ್ರವೀಣ್ ನೆಟ್ಟಾರು ಅವರ ಸ್ವಗ್ರಾಮ ನೆಟ್ಟಾರುವಿನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಬಿಲ್ಲವ ಸಂಪ್ರದಾಯದಂತೆ ಮೃತದೇಹದ ಅಂತಿಮ ವಿಧಿವಿಧಾನ ನಡೆದು ಅಂತ್ಯಸಂಸ್ಕಾರ ನಡೆಸಲಾಯಿತು.

ಈ ಸಂದರ್ಭ ಕುಟುಂಬಸ್ಥರಿಗೆ ಮಾತ್ರ ಸ್ಥಳದಲ್ಲಿ ಅವಕಾಶ ನೀಡಲಾಗಿತ್ತು. ಈ ಸಮಯದಲ್ಲಿ ಪ್ರವೀಣ್‌ ಪತ್ನಿ, ತಂದೆ-ತಾಯಿ ಸೇರಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ತಂದೆಯೇ ಮಗನ ಚಿತೆಗೆ ಅಗ್ನಿ ಸ್ಪರ್ಶ ನೀಡುವ ಮೂಲಕ ಅಂತಿಮ ಸಂಸ್ಕಾರ ನಡೆಸಲಾಯಿತು. ಬೆಳ್ಳಾರೆಯಲ್ಲಿ ಪೊಲೀಸರು ಮೈಕ್ ಮೂಲಕ ಜನರು ಚದುರಿ ಹೋಗುವಂತೆ ಕರೆ ನೀಡುತ್ತಿದ್ದರು. ಸಂಸದ ನಳಿನ್ ಕುಮಾರ್ ಕಾರನ್ನು ದಿಕ್ಕಾರ ಕೂಗಿದ ಕಾರ್ಯಕರ್ತರು ತಡೆದರು. ಈ ಸಮಯದಲ್ಲಿ ಲಾಟಿಚಾರ್ಜ್ ನಡೆಸಲಾಗಿತ್ತು.

Also Read  ಮಹಾಲಕ್ಷ್ಮೀ ಕೊಲೆ ಪ್ರಕರಣ- ಇಂದು ಪೊಲೀಸರಿಗೆ ಮರಣೋತ್ತರ ರಿಪೋರ್ಟ್ ಸಲ್ಲಿಕೆ

error: Content is protected !!
Scroll to Top