ಅಕ್ರಮ ಹಣ ವರ್ಗಾವಣೆ ಪ್ರಕರಣ- ಇಡಿ ಮುಂದೆ ಹಾಜರಾದ ಸೋನಿಯಾ ಗಾಂಧಿ ➤ ರಾಹುಲ್ ಗಾಂಧಿ ಬಂಧನ

(ನ್ಯೂಸ್ ಕಡಬ) newskadaba.com ನವದೆಹಲಿ, ಜು. 26. ನ್ಯಾಷನಲ್ ಹೆರಾಲ್ಡ್ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಎರಡನೇ ಸುತ್ತಿನ ವಿಚಾರಣೆಗಾಗಿ ಸೋನಿಯಾ ಗಾಂಧಿ ಮಂಗಳವಾರ ನವದೆಹಲಿಯ ಇಡಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದು, ಈ ಬಗ್ಗೆ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಅಲ್ಲದೇ ಮಲ್ಲಿಕಾರ್ಜುನ ಖರ್ಗೆ, ರಂಜಿತ್ ರಂಜನ್, ಕೆಸಿ ವೇಣುಗೋಪಾಲ್, ಮಾಣಿಕಂ ಠಾಗೋರ್, ಇಮ್ರಾನ್ ಪ್ರತಾಪಗಢಿ ಮತ್ತು ಕೆ ಸುರೇಶ್ ಸೇರಿದಂತೆ ಪಕ್ಷದ ಇತರ ನಾಯಕರನ್ನೂ ಕೂಡಾ ಬಂಧಿಸಲಾಗಿದೆ ಎಂದು ಎಎನ್‌ಐ ವರದಿ ಮಾಡಿದೆ.

Also Read  ಅಮಲು ಪದಾರ್ಥ ನೀಡಿ ನಗ-ನಗದು ದೋಚಿದ ಅಪರಿಚಿತರು ► ಕಂಗಾಲಾದ ಉಡುಪಿ ರೈಲ್ವೇ ಯಾತ್ರಿ ಸಂಘದ ಪದಾಧಿಕಾರಿ

error: Content is protected !!
Scroll to Top