ಕಡಬ: ಸರಸ್ವತಿ ವಿದ್ಯಾಲಯದಲ್ಲಿ ಕಾರ್ಗಿಲ್ ವಿಜಯ ದಿವಸ್ ಅಚರಣೆ ➤ ಮಾಜಿ ಸೈನಿಕರಿಗೆ ಗೌರವಾರ್ಪಣೆ

(ನ್ಯೂಸ್ ಕಡಬ) newskadaba.com ಕಡಬ, ಜು. 26. ಕಾರ್ಗಿಲ್ ವಿಜಯ್ ದಿವಸ್ ದಿನಾಚರಣೆಯ ಅಂಗವಾಗಿ ಸರಸ್ವತಿ ವಿದ್ಯಾಲಯಲ್ಲಿ ಮಾಜಿ ಸೈನಿಕರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು.

ಮೊದಲಿಗೆ ಕಾರ್ಗಿಲ್ ಯುದ್ದದಲ್ಲಿ ವೀರ ಮರಣವನ್ನಪ್ಪಿದ ಯೋಧರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಸೈನಿಕರಾದ ರಘುನಾಥ ಹೆಬ್ಬಾರ್ ವಾಳ್ಯ, ಗೋಪಾಲ್ ವಿ. ಬಿಳಿನೆಲೆ, ವಾಸುದೇವ ಗೌಡ, ಸೈಮನ್ ಕೆ.ಸಿ, ಸುಬೇದಾರ್ ಗೋಪಾಲಕೃಷ್ಣ ಎ.ಕೆ. ಅವರ ಸ್ಮರಣಾರ್ಥ ಗೀತಾ ಅಮೈ ಕೇವಳ, ವಾಡ್ಯಪ್ಪ ಗೌಡ ಮಂಡೆಕರ ಹಾಗೂ ದೇಶದ ವಿವಿಧೆಡೆ ಸೈಕಲ್ ಸವಾರಿ ಮೂಲಕ ಸಮಾಜ ಜಾಗೃತಿ ಮೂಡಿಸುತ್ತಿರುವ ಮಧ್ಯಪ್ರದೇಶ ಮೂಲದ ಬೃಜೇಶ್ ಶರ್ಮಾರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಸ್ವತಿ ವಿದ್ಯಾಲಯದ ಸಂಚಾಲಕ ವೆಂಕಟ್ರಮಣ ರಾವ್ ಮಂಕುಡೆ ವಹಿಸಿದ್ದರು. ವೇದಿಕೆಯಲ್ಲಿ ಆಡಳಿತ ಮಂಡಳಿ ಸದಸ್ಯೆ ವಿಧುಷಿ ಪ್ರಮೀಳಾ ಲೋಕೇಶ್ ಉಪಸ್ಥಿತರಿದ್ದರು. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಮಾಧವ ಕೋಲ್ಪೆ ಸ್ವಾಗತಿಸಿದರು. ಶಿಕ್ಷಕ ಶಿವಪ್ರಸಾದ್ ವಂದನಾರ್ಪಣೆ ಸಲ್ಲಿಸಿದರು. ಶಿಕ್ಷಕ ವಸಂತ ಕರ್ಂಬೋಡಿ ಕಾರ್ಯಕ್ರಮ ನಿರೂಪಿಸಿದರು.

Also Read  ಹೊಂಡಗುಂಡಿಗಳಿಂದ ದುಸ್ತರಗೊಂಡಿರುವ ಕಡಬ-ಪೇರಡ್ಕ ಸಂಪರ್ಕ ರಸ್ತೆ!

error: Content is protected !!
Scroll to Top