ಜಿಲ್ಲಾಧಿಕಾರಿಯನ್ನು ಭೇಟಿಯಾದ ಮಸೂದ್ ಕುಟುಂಬಸ್ಥರು ➤ ನ್ಯಾಯಕ್ಕಾಗಿ ಆಗ್ರಹ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 26. ಸುಳ್ಯ ತಾಲೂಕಿನ ಕಳಂಜದಲ್ಲಿ ಸಂಘಪರಿವಾರದ ಕಾರ್ಯಕರ್ತರಿಂದ ಹತ್ಯೆಗೊಳಗಾದ ಮಸೂದ್ ಕುಟುಂಬಸ್ಥರು ದ.ಕ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧೀಕ್ಷಕರನ್ನು ಭೇಟಿಯಾಗಿ ನ್ಯಾಯಕ್ಕಾಗಿ ಆಗ್ರಹಿಸಿ, ಕೊಲೆಗಾರರನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಿದರು.

ಸರ್ಕಾರದಿಂದ 25 ಲಕ್ಷ ರೂಪಾಯಿ ಪರಿಹಾರ ಧನ ಕೊಡಲು ಶಿಫಾರಸು ಮಾಡುವಂತೆಯೂ ಈ ಸಂದರ್ಭದಲ್ಲಿ ಆಗ್ರಹಿಸಿದರು. ನಿಯೋಗದಲ್ಲಿ ಮಸೂದ್‌ನ ತಾಯಿ ಸಾರಮ್ಮ, ಸಹೋದರ ಇರ್ಶಾದ್ , ಮಿರ್ಶಾದ್, ಸಹೋದರಿ ಶಿಫಾನ, ಮಾವಂದಿರಾದ ಶೌಕತ್ ಕಳಂಜ, ಹೈದರ್ ಕಳಂಜ ಹಾಗೂ ಸ್ಥಳೀಯರಾದ ಫೈಝಲ್ ಬೆಳ್ಳಾರೆ, ಹಮೀದ್ ಮರಕ್ಕಡ ಮೊದಲಾದವರು ಜೊತೆಗಿದ್ದರು.

Also Read  ಜಲಜೀವನ್ ಮಿಷನ್ ಯೋಜನೆಯಲ್ಲಿ ವಿಳಂಬ ಸಹಿಸುವುದಿಲ್ಲ- ಜಿ.ಪಂ. ಸಿಇಓ ಡಾ. ಆನಂದ್

error: Content is protected !!
Scroll to Top