(ನ್ಯೂಸ್ ಕಡಬ) newskadaba.com ಮಾಣಿ, ಜು. 26. ಸತ್ಯ ವಿಶ್ವಾಸಿಗಳಾದ ಸ್ತ್ರೀ ಪುರುಷರಿಗೆ ಒಳಿತು ಮತ್ತು ಕೆಡುಕಿನ ಬಗ್ಗೆ ತಿಳಿದಿರಬೇಕು, ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿ ಬದುಕುವಂತಿಲ್ಲ ಅದನ್ನು ಕಲಿಯಲು ಒಂದು ಉತ್ತಮ ಅವಕಾಶವಾಗಿದೆ ತಾಜುಲ್ ಫುಖಹಾಅ್ ದರ್ಸ್ ಎಂದು ಉಸ್ತಾದ್ ಇಬ್ರಾಹಿಂ ಸಅದಿ ಮಾಣಿ ಹೇಳಿದರು.
ಅವರು ರಾಜ್ಯ ಸಮಿತಿಯ ನಿರ್ದೇಶನದಂತೆ ಎಸ್‌ವೈಎಸ್ ಸೂರಿಕುಮೇರು ಬ್ರಾಂಚ್ ವತಿಯಿಂದ ನಡೆದ ತಾಜುಲ್ ಫುಖಹಾಅ್ ದರ್ಸ್ ಮತ್ತು ದಾರುಲ್ ಕುರ್‌ಆನ್ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅಶ್ರಫ್ ಸಖಾಫಿ ಸೂರಿಕುಮೇರು ಮಹ್‌ಳರತುಲ್ ಬದ್ರಿಯಾ ಮಜ್ಲಿಸ್‌ಗೆ ನೇತೃತ್ವ ನೀಡಿದರು. ಕಾರ್ಯಕ್ರಮದಲ್ಲಿ ಎಸ್‌ವೈಎಸ್ ಜಿಲ್ಲಾ (ಈಸ್ಟ್) ಮಾಧ್ಯಮ ಕಾರ್ಯದರ್ಶಿ ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆ, ಅಬ್ದುಲ್ ರಝಾಕ್ ಕೊಡಾಜೆ, ಮುಹಮ್ಮದ್ ಅಶ್ರಫ್ ಗಡಿಯಾರ, ಯೂಸುಫ್ ಹಾಜಿ ಸೂರಿಕುಮೇರು, ನಿಝಾಂ ಸಅದಿ ಸೂರಿಕುಮೇರು, ಹಾಫಿಳ್ ಮುರ್ಶಿದ್ ಸೂರಿಕುಮೇರು, ಅಬ್ದುಲ್ ಖಾದರ್ ಬರಿಮಾರು, ಹಂಝ ಸೂರಿಕುಮೇರು, ಸುಲೈಮಾನ್ ನೆಲ್ಲಿ, ಮುನೀರ್ ಮಾಣಿ, ಹಬೀಬ್ ಸೂರಿಕುಮೇರು, ಸ್ವಾದಿಕ್ ಸೂರಿಕುಮೇರು ಮೊದಲಾದವರು ಉಪಸ್ಥಿತರಿದ್ದರು. ಅಬ್ದುಲ್ ಕರೀಂ ಸೂರಿಕುಮೇರು ಅಧ್ಯಕ್ಷತೆಯಲ್ಲಿ ಸಲೀಂ ಮಾಣಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.