ಉಳ್ಳಾಲ: ಬೃಹತ್ ರಕ್ತದಾನ ಶಿಬಿರ ➤ ಜೀವದಾನಿಗಳಾದ ಬರೋಬ್ಬರಿ 203 ಸಮಾಜಸ್ನೇಹಿ ರಕ್ತದಾನಿಗಳು

(ನ್ಯೂಸ್ ಕಡಬ) newskadaba.com ಉಳ್ಳಾಲ, ಜು. 26. ಲೈಫ್ ಕೇರ್ಸ್ ಫೌಂಡೇಶನ್ ಉಳ್ಳಾಲ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಇದರ ಜಂಟಿ ಸಹಭಾಗಿತ್ವದಲ್ಲಿ ಕೆಎಂಸಿ ರಕ್ತನಿಧಿ ಮಂಗಳೂರು ಇದರ ಸಹಯೋಗದೊಂದಿಗೆ ಉಳ್ಳಾಲದ ನಗರಸಭೆ ವಠಾರದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು.

ಸಭಾ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದ ಉಳ್ಳಾಲ ಸೈಯದ್ ಮದನಿ ದರ್ಗಾ ಸಮಿತಿಯ ಅಧ್ಯಕ್ಷರಾದ ರಶೀದ್ ಹಾಜಿ ಅವರು ರಕ್ತದಾನ ಶಿಬಿರಗಳಂತಹ ಮಹತ್ಕಾರ್ಯವನ್ನು ಹಮ್ಮಿಕೊಳ್ಳುವುದರ ಮೂಲಕ ಯುವಕರಲ್ಲಿ ಸಾಮಾಜಿಕ ಕಳಕಳಿಯನ್ನು ಮೂಡಿಸುತ್ತಾ ಹಾದಿ ತಪ್ಪುತ್ತಿರುವ ಯುವ ಸಮೂಹಕ್ಕೆ ಲೈಫ್ ಕೇರ್ಸ್ ಫೌಂಡೇಶನ್ ಮಾದರಿಯಾಗಿದೆ ಎಂದು ಹೇಳಿದರು. ವೇದಿಕೆಯಲ್ಲಿ ಉಳ್ಳಾಲ ಪೊಲೀಸ್ ವೃತ್ತ ನಿರೀಕ್ಷಕರಾದ ಸಂದೀಪ್ ಜಿ.ಎಸ್, ಭಗವತಿ ದೇವಸ್ಥಾನ ಉಳ್ಳಾಲ ಇದರ ಪ್ರಧಾನ ಅರ್ಚಕರಾದ ಬಾಲಕೃಷ್ಣ ಮಂಜಪ್ಪ ಕಾರ್ನವರ್, ಆಮ್ ಆದ್ಮಿ ಪಾರ್ಟಿ ದ.ಕ ಜಿಲ್ಲಾಧ್ಯಕ್ಷರಾದ ಸಂತೋಷ್ ಕಾಮತ್ ಚಲನಚಿತ್ರ ನಟರಾದ ಮಹೇಶ್ ಎಸ್ ಬಾಬು, ನಿರ್ಮಲ ಹೆಲ್ತ್ ಸೆಂಟರ್ ಉಳ್ಳಾಲ ಇದರ ಡಾ.ಲೆನಿತಾ ಡಿಸೋಜ, ಬ್ಲಡ್ ಡೋನರ್ಸ್ ಮಂಗಳೂರು (ರಿ)ಇದರ ಅಧ್ಯಕ್ಷರಾದ ಸಿದ್ದೀಕ್ ಮಂಜೇಶ್ವರ, ಉಳ್ಳಾಲ ನಗರಸಭಾ ಸದಸ್ಯರುಗಳಾದ ಭಗವಾನ್ ದಾಸ್, ಮಹಮ್ಮದ್ ಬಶೀರ್, ಮುಸ್ಲಿಂ ಒಕ್ಕೂಟ ಉಳ್ಳಾಲ ಇದರ ಅಧ್ಯಕ್ಷರಾದ ಇಸ್ಮಾಯಿಲ್ ಉಳ್ಳಾಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲೈಫ್ ಕೇರ್ಸ್ ಫೌಂಡೇಶನ್ ಪರವಾಗಿ ನಿಸಾರ್ ಲೈಫ್ ಸ್ಟೈಲ್, ಮುಸದ್ದೀಕ್, ನೌಝರ್, ಫಾರೂಖ್, ನವಾಝ್, ನೌಶಾದ್, ನಾಸೀರ್,ಅನೀಝ್, ರಾಝ್, ಶಫೀಕ್, ಹಂಝ, ದಾಯಿ, ನಝೀರ್, ನಿಸಾರ್ ಮೊದಲಾದವರು ಉಪಸ್ಥಿತರಿದ್ದರು. ಕಳೆದ ಕೋವಿಡ್ ಸಂದಿಗ್ಧ ಸಂದರ್ಭದಲ್ಲಿ ರಕ್ತನಿಧಿಗಳಲ್ಲಿ ರಕ್ತದ ಅಭಾವ ತಲೆದೂರಿದಾಗ ಯಶಸ್ವಿ ರಕ್ತದಾನ ಶಿಬಿರ ನಡೆಸಿ ಸಮಾಜಕ್ಕೆ ಮಾದರಿಯಾಗಿದ್ದ ಲೈಫ್ ಕೇರ್ಸ್ ಫೌಂಡೇಶನ್ ಉಳ್ಳಾಲ ಸಂಸ್ಥೆಯು ಈ ಬಾರಿ ಅದ್ವಿತೀಯ ಎಂಬಂತೆ ಇನ್ನೂರಕ್ಕಿಂತಲೂ ಅಧಿಕ ಅಂದರೆ ಒಟ್ಟು 203 ಯುನಿಟ್ ರಕ್ತವನ್ನು ದಾನಿಗಳಿಂದ ಸಂಗ್ರಹಿಸಲಾಯಿತು.

Also Read  ಮಾಟ ಮಂತ್ರ, ದುಷ್ಟಶಕ್ತಿಗಳಿಂದ ನೊಂದಿದ್ದರೆ ಏನು ಮಾಡಬೇಕು ಎಂದು ತಿಳಿದಿದೆಯೇ ನಿಮಗೆ ? ಇಲ್ಲಿದೆ ಸುಲಭ ಪರಿಹಾರ

error: Content is protected !!
Scroll to Top