ತಂದೆಯ ಹತ್ಯೆಗೆ ಫೇಸ್ ಬುಕ್ ಮೂಲಕ ಹಂತಕರನ್ನು ಬುಕ್ ಮಾಡಿದ ಪಾಪಿ ಮಗ…!!

(ನ್ಯೂಸ್ ಕಡಬ) newskadaba.com ಮಧ್ಯಪ್ರದೇಶ, ಜು. 25. ಮಗನೋರ್ವ ತನ್ನ ಅಪ್ಪನನ್ನೇ ಕೊಲೆ ಮಾಡಿಸಲು ಫೇಸ್‌ಬುಕ್ ಮೂಲಕ ಕೊಲೆಗಾರನನ್ನು ಬುಕ್ ಮಾಡಿದ ಘಟನೆ ಬೆಳಕಿಗೆ ಬಂದಿದೆ.


ಮನೆಯಲ್ಲಿ ಮಲಗಿದ್ದ ಮಹೇಶ್ ಗುಪ್ತಾ ಎಂಬವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದ್ದು, ಇದರಲ್ಲಿ ಅವರ ಮಗನ ಪಾತ್ರವಿದೆ ಎಂದು ಶಂಕಿಸಿದ ಪೊಲೀಸರು ವಿಚಾರಣೆ ನಡೆಸಿದಾಗ, ಆತ ಕುಡಿತದ ಚಟ, ಜೂಜಾಟ ಮತ್ತು ಇತರ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವುದು ಪತ್ತೆಯಾಗಿದೆ. ಹೀಗೇ ತನ್ನ ಚಟುವಟಿಕೆಗಳಿಗೆ ತಂದೆ ಹಣ ಕೊಡಲು ನಿರಾಕರಿಸಿದ್ದರಿಂದ ತಂದೆಯ ಮೇಲೆ ಸಿಟ್ಟಿಗೆದ್ದ ಮಗ ಫೇಸ್​ಬುಕ್ ಮೂಲಕ ತಂದೆಯನ್ನು ಕೊಲ್ಲಲು ಹಂತಕರನ್ನು ಹುಡುಕಿ ಬುಕ್ ಮಾಡಿರುವುದು ಬೆಳಕಿಗೆ ಬಂದಿದೆ.

Also Read  ಕೋಳಿ ಅಂಕಕ್ಕೆ ಪೊಲೀಸ್ ದಾಳಿ- 8 ಮಂದಿ ವಶಕ್ಕೆ

error: Content is protected !!
Scroll to Top