(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜು. 25. ಸ್ಕೂಟರ್ ನಲ್ಲಿ ತೆರಳುತ್ತಿದ್ದ ಯುವಕನನ್ನು ಕಾರಿನಲ್ಲಿ ಬಂದ ತಂಡವೊಂದು ಕಿಡ್ನಾಪ್ ಮಾಡಿ ಆಳದಂಗಡಿ ಕೆದ್ದು ಶಾಲೆಗೆ ಕರೆದೊಯ್ದು ಹಲ್ಲೆ ಮಾಡಿದ ಘಟನೆ ನಡೆದಿದೆ.
ಹಲ್ಲೆಗೊಳಗಾದ ಯುವಕನನ್ನು ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಅಂಕಾಜೆ ನಿವಾಸಿ ಮೆಕ್ಯಾನಿಕ್ ನಿಶೇತ್(23) ಎಂದು ಗುರುತಿಸಲಾಗಿದೆ. ಬೊಲೆರೋ ವಾಹನಲ್ಲಿ ಬಂದ ಎಂಟು ಮಂದಿ ದುಷ್ಪರ್ಮಿಗಳ ತಂಡವೊಂದು ನಿತೇಶ್ ನನ್ನು ಕಿಡ್ನಾಪ್ ಮಾಡಿ, ಅಳದಂಗಡಿಯ ಕೆದ್ದು ಶಾಲೆಯ ಆಟದ ಮೈದಾನಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಮಾರಣಾಂತಿಕ ಹಲ್ಲೆ ನಡೆಸಿ, ಆತನಲ್ಲಿದ್ದ ಮೊಬೈಲ್ ಫೋನ್ ಮತ್ತು ಚಿನ್ನದ ಸರವನ್ನು ದೋಚಿದ್ದಾರೆ ಎನ್ನಲಾಗಿದೆ. ಘಟನೆಯ ಕುರಿತು ಮಾಹಿತಿ ತಿಳಿದ ನಿತೇಶ್ ಕಡೆಯವರು ಕೆದ್ದುವಿಗೆ ಹೋಗಿದ್ದು, ಎರಡು ತಂಡದ ನಡುವೆ ಹೊಡೆದಾಟ ನಡೆದಿದೆ ಎನ್ನಲಾಗಿದೆ. ಯುವತಿಗೆ ಮೆಸೇಜ್ ಮಾಡಿದ್ದಾನೆ ಎಂಬ ವಿಚಾರಕ್ಕೆ ಈ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಇನ್ನು ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.