ಆಲಂಕಾರು: ಜುಗಾರಿ ಅಡ್ಡೆಗೆ ದಾಳಿ ➤ 3 ಆರೋಪಿಗಳು ಅರೆಸ್ಟ್

(ನ್ಯೂಸ್ ಕಡಬ) newskadaba.com ಆಲಂಕಾರು, ಜು. 24. ಜುಗಾರಿ ಆಟ ಆಡುತ್ತಿದ್ದ ವೇಳೆ ದಾಳಿ ನಡೆಸಿದ ಕಡಬ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ಆಲಂಕಾರು ಗ್ರಾಮದ ನಾಡ್ತಿಲ ಸರಕಾರಿ ಗುಡ್ಡದಲ್ಲಿ ನಡೆದಿದೆ.

ಬಂಧಿತ ಆರೋಪಿಗಳನ್ನು ಸಂತೋಷ್ ಗುರಿಯಡ್ಕ, ರಘುರಾಮ ಶರವೂರು, ಮಂಜುನಾಥ ಬೇಳ್ಪಾಡಿ ಎಂದು ಗುರುತಿಸಲಾಗಿದೆ. ದಾಳಿಯ ವೇಳೆ ಹಲವಾರು ಮಂದಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳದಿಂದ 5 ಮೋಟಾರ್ ಸೈಕಲ್, ಒಂದು ಅಟೋ ರಿಕ್ಷಾ ಹಾಗೂ ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಕಡಬ ಠಾಣಾ ಎಸ್ಐ ಆಂಜನೇಯ ರೆಡ್ಡಿ, ಎಚ್.ಸಿ ಗಳಾದ ಭವಿತ್ ರೈ, ಹರೀಶ್, ರಾಜು, ಪಿಸಿ ಚಂದನ್ ಕುಮಾರ್ ವಾಹನ ಚಾಲಕ ನಾರಾಯಣ ಪಾಟಾಳಿ ಪಾಲ್ಗೊಂಡಿದ್ದರು.

Also Read  ಕಾರ್ಕಳ: ದ್ವಿಚಕ್ರ ವಾಹನ -ಟಿಪ್ಪರ್ ನಡುವೆ ಅಪಘಾತ ➤ ಓರ್ವ ಮಹಿಳೆ ಮೃತ್ಯು

error: Content is protected !!
Scroll to Top