(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜು.24. ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆ ಎಂಬಲ್ಲಿ ಕಳೆದ 12 ವರುಷಗಳಿಂದ ವಿವಿಧ ವಿದ್ಯಾಸಂಸ್ಥೆಗಳನ್ನು ನಡೆಸಿಕೊಂಡು ಬರುತ್ತಿರುವ ಮನ್ ಶರ್ ಅಕಾಡೆಮಿಯಲ್ಲಿ 2022 – 23ರ ಶೈಕ್ಷಣಿಕ ವರ್ಷದಿಂದ ಪದವಿಪೂರ್ವ ಕಾಲೇಜ್ ನಡೆಸಲು ಸರಕಾರದಿಂದ ಅಧಿಕೃತ ಅನುಮತಿ ದೊರೆತಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಿಂದ ಹೊಸ ಕಾಲೇಜು ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಿದ 14 ಕಾಲೇಜುಗಳ ಪೈಕಿ ಮೂರು ಕಾಲೇಜುಗಳಿಗೆ ಅನುಮತಿ ದೊರೆತಿದೆ. ಅದರಲ್ಲಿ ಮನ್ ಶರ್ ಪಿಯು ಕಾಲೇಜ್ ಒಂದಾಗಿದ್ದು, ಬೆಳ್ತಂಗಡಿ ತಾಲೂಕಿನಲ್ಲಿ ಸರಕಾರದಿಂದ ಅನುಮತಿ ದೊರಕಿದ ಪ್ರಪ್ರಥಮ MEIF ವಿದ್ಯಾ ಸಂಸ್ಥೆಯಾಗಿದೆ. ಈ ಕಾಲೇಜಿನ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ಅಧ್ಯಕ್ಷರಾದ ಬಹು| ಸೈಯದ್ ಉಮರ್ ಅಸ್ಸಖಾಫ್ ಮನ್ಶರ್ ತಂಙಳ್ ವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.