ವಿಟ್ಲ: ಫೇಸ್ ಬುಕ್ ನಲ್ಲಿ ಪುರುಷ ಎಂದು ನಂಬಿಸಿ ಯುವತಿಗೆ ವಂಚನೆ ➤ ತೃತೀಯಲಿಂಗಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜು. 24. ಪುರುಷನೆಂದು ನಂಬಿಸಿ ಫೇಸ್‌ಬುಕ್ ಖಾತೆಯ ಮೂಲಕ ಮಹಿಳೆಯೊಬ್ಬರಿಗೆ ವಂಚಿಸಿದ ಆರೋಪದ ಮೇಲೆ ತೃತೀಯಲಿಂಗಿಯೊಬ್ಬರನ್ನು ಬಂಧಿಸಿರುವ ಘಟನೆ ವಿಟ್ಲದಲ್ಲಿ ನಡೆದಿದೆ.


ಸಿವಿಲ್ ಇಂಜಿನಿಯರ್ ಎಂದು ನಟಿಸಿದ ಆರೋಪಿ ಫೇಸ್‌ಬುಕ್‌ನಲ್ಲಿ ಯುವತಿಯೊಂದಿಗೆ ಸ್ನೇಹ ಬೆಳೆಸಿ ಕಳೆದ ನಾಲ್ಕು ವರ್ಷಗಳಿಂದ ಇಬ್ಬರೂ ಪರಸ್ಪರ ಚಾಟ್ ಮಾಡುತ್ತಿದ್ದುದಲ್ಲದೇ ಫೋನ್‌ನಲ್ಲಿ ಕೂಡಾ ಮಾತನಾಡುತ್ತಿದ್ದರು ಎನ್ನಲಾಗಿದೆ. ಈ ವಿಷಯ ತಿಳಿದ ಹುಡುಗಿಯ ತಾಯಿ, ಅದನ್ನು ತಮ್ಮ ಕುಟುಂಬ ಸ್ನೇಹಿತೆ ವಕೀಲೆ ಶೈಲಜಾ ರಾಜೇಶ್ ಅವರೊಂದಿಗೆ ಹಂಚಿಕೊಂಡಿದ್ದಾರೆ. ಶೇಲಜಾ ರಾಜೇಶ್ ಅವರು ವಿಟ್ಲ ಪೊಲೀಸರ ನೆರವಿನೊಂದಿಗೆ ಆರೋಪಿಯ ದೂರವಾಣಿ ಕರೆಗಳ ಸ್ಥಳವನ್ನು ಪತ್ತೆಹಚ್ಚಿ ಹುಡುಕಾಟ ನಡೆಸಿದ್ದು, ಆರೋಪಿಯನ್ನು ಉಡುಪಿ ಜಿಲ್ಲೆಯ ಶಂಕರನಾರಾಯಣ ಎಂಬಲ್ಲಿ ಪತ್ತೆ ಹಚ್ಚಿದಾಗ ಪೊಲೀಸರಿಗೆ ಆತ ತೃತೀಯಲಿಂಗಿ ಎಂಬುದು ತಿಳಿದುಬಂದಿದೆ. ಯುವತಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಪೊಲೀಸರು ತೃತೀಯ ಲಿಂಗಿಯನ್ನು ಬಂಧಿಸಿದ್ದಾರೆ.

Also Read  ಶ್ರೀ ರಾಮಕುಂಜೇಶ್ವರ ಎನ್ನೆಸೆಸ್ಸ್ ಉದ್ಘಾಟನೆ

error: Content is protected !!
Scroll to Top