ದ.ಕ, ಉಡುಪಿ ಜಿಲ್ಲೆಯ ವಿವಿಧ ಪಶು ವೈದ್ಯಾಧಿಕಾರಿಗಳ ವರ್ಗಾವಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 24. ದ.ಕ ಹಾಗೂ ಉಡುಪಿ ಜಿಲ್ಲೆಯ ವಿವಿಧ ಪಶು ವೈದ್ಯಾಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಪುತ್ತೂರು ಪಶು ಆಸ್ಪತ್ರೆಯ ಸಂಚಾರಿ ಮತ್ತು ವಿಸ್ತರಣೆ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಉಷಾ ವರ್ಗಾವಣೆಯಾಗಿದೆ. ಬೆಂಗಳೂರಿನ ಪಶುಪಾಲನಾ ಇಲಾಖೆ ಆಯುಕ್ತರ ಕಚೇರಿಯ ಜಾನುವಾರು ರೋಗಗಳ ಕಣ್ಗಾವಲು ಯೋಜನೆ ಶಾಖೆಯ ಮುಖ್ಯ ಪಶು ವೈದ್ಯಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. ಪುತ್ತೂರು ತಾಲೂಕಿನ ಕೊಳ್ತಿಗೆ ಪಶು ಚಿಕಿತ್ಸಾಲಯದ ಹಿರಿಯ ಪಶು ವೈದ್ಯಾಧಿಕಾರಿ ಡಾ. ಎಸ್.ಕೆ. ಪುನೀತ್ ಅವರನ್ನು ಕಡಬ ತಾಲೂಕಿನ ಕೊಯಿಲ ಹಂದಿ ತಳಿ ಸಂವರ್ಧನಾ ಕೇಂದ್ರದ ಹಿರಿಯ ಪಶುವೈದ್ಯಾಧಿಕಾರಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

ಬಂಟ್ವಾಳ ತಾಲೂಕಿನ ಕುರ್ನಾಡು ಪಶುಚಿಕಿತ್ಸಾಲಯದ ಹಿರಿಯ ಪಶು ವೈದ್ಯಾಧಿಕಾರಿ ಡಾ. ನಿಖಿಲ್ ರಾಜ್ ಅವರನ್ನು ಮಂಚಿ ಪಶು ಚಿಕಿತ್ಸಾಲಯದ ಖಾಲಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

Also Read  ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪೂಜೆ ಸೇವೆಗಳು ಆರಂಭ

ಸುಳ್ಯ ತಾಲೂಕಿನ ಅರಂತೋಡು ಪಶು ಚಿಕಿತ್ಸಾಲಯದ ಹಿರಿಯ ಪಶು ವೈದ್ಯಾಧಿಕಾರಿ ಡಾ. ನಿತಿನ್ ಪ್ರಭು ಅವರನ್ನು ಸುಳ್ಯ ಪಶು ಆಸ್ಪತ್ರೆಯ ಹಿರಿಯ ಪಶು ವೈದ್ಯಾಧಿಕಾರಿ ಹುದ್ದೆಗೆ ವರ್ಗಾಯಿಸಲಾಗಿದೆ. ಚಿಟಗುಪ್ಪ ತಾಲೂಕಿನ ಇಟಗಾ ಪಶು ಚಿಕಿತ್ಸಾಲಯದ ಪಶುವೈದ್ಯಾಧಿಕಾರಿ ಡಾ. ಅರುಣ್ ಕುಮಾರ್ ಅವರನ್ನು ಕಾರ್ಕಳ ತಾಲೂಕಿನ ನಿಟ್ಟೆ ಪಶುಚಿಕಿತ್ಸಾಲಯದ ಖಾಲಿ ಹುದ್ದೆಗೆ ವರ್ಗಾಯಿಸಲಾಗಿದೆ. ಮಳವಳ್ಳಿ ತಾಲೂಕಿನ ಬಂಡೂರು ಪಶುಚಿಕಿತ್ಸಾಲಯ ಪಶು ವೈದ್ಯಾಧಿಕಾರಿ ಡಾ. ಯು.ಬಿ. ಗ್ರೀಷ್ಮ ರಾವ್ ಅವರನ್ನು ಕಾರ್ಕಳ ತಾಲೂಕಿನ ಬೆಳ್ಮಣ್ ಪಶು ಚಿಕಿತ್ಸಾಲಯದ ಖಾಲಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಚೆನ್ನರಾಯಪಟ್ಟಣ ತಾಲೂಕಿನ ಉದಯಪುರ ಪಶು ಚಿಕಿತ್ಸಾಲಯದ ಪಶು ವೈದ್ಯಾಧಿಕಾರಿ ಡಾ. ಧನುಷ್ ಅವರನ್ನು ಉಡುಪಿ ತಾಲೂಕಿನ ಬೈರಂಪಳ್ಳಿ ಪಶುಚಿಕಿತ್ಸಾಲಯದ ಖಾಲಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

Also Read  ಪುತ್ತೂರು: ಮನೆಗೆ ಜಪ್ತಿಗೆ ಬಂದ ಬ್ಯಾಂಕ್ ಸಿಬ್ಬಂದಿ ➤ ಮನೆಯೊಡತಿ ನೇಣಿಗೆ ಶರಣು

error: Content is protected !!
Scroll to Top