ಶಿರಾಡಿ ಹಾಗೂ ಸಂಪಾಜೆ ಘಾಟ್ ಸಂಪರ್ಕ ಕಡಿತದ ಹಿನ್ನೆಲೆ ➤ ಜು.26ರಿಂದ ಮಂಗಳೂರು – ಬೆಂಗಳೂರು ನಡುವೆ ವಿಶೇಷ ರೈಲು ಆರಂಭ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 24. ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ಮತ್ತು ಎನ್ಎಚ್ 276 ಸಂಪಾಜೆ ಘಾಟ್ ನಡುವೆ ರಸ್ತೆ ಸಂಪರ್ಕ ಕಡಿತಗೊಂಡಿರುವ ಕಾರಣ ಜುಲೈ 26 ರಿಂದ ಮೈಸೂರು ಮೂಲಕ ಬೆಂಗಳೂರು ಮತ್ತು ಮಂಗಳೂರು ನಡುವೆ ತ್ರಿಪ್ತಾಹಿಕ ವಿಶೇಷ ಎಕ್ಸ್​ಪ್ರೆಸ್ ರೈಲು ಆರಂಭಿಸಲಾಗುವುದು ಎಂದು ನೈಋತ್ಯ ರೈಲ್ವೇ ಇಲಾಖೆ ಅಧಿಕೃತ ಪ್ರಕಟಣೆ ಹೊರಡಿಸಿದೆ.

ಇದರಂತೆ ಜುಲೈ 22 ರಂದು ನೈಋತ್ಯ ರೈಲ್ವೇ ಬಿಡುಗಡೆಗೊಳಿಸಿರುವ ಅಧಿಸೂಚನೆಯ ಪ್ರಕಾರ ರೈಲು ಸಂಖ್ಯೆ 06547/548 ಬೆಂಗಳೂರು-ಮಂಗಳೂರು ಸೆಂಟ್ರಲ್ ತ್ರಿಪ್ತಾಹಿಕ ವಿಶೇಷ ರೈಲು ಜುಲೈ 26 ರಿಂದ ಆಗಸ್ಟ್ 31 ರವರೆಗೆ ಸಂಚರಿಸಲಿದೆ.

ರೈಲು ಸಂಖ್ಯೆ 06547 ಬೆಂಗಳೂರು-ಮಂಗಳೂರು ಸೆಂಟ್ರಲ್ ತ್ರಿಸಾಪ್ತಾಹಿಕ ವಿಶೇಷ ರೈಲು ಭಾನುವಾರ, ಮಂಗಳವಾರ ಮತ್ತು ಗುರುವಾರದಂದು ರಾತ್ರಿ 8.30 ಕ್ಕೆ ಬೆಂಗಳೂರಿನಿಂದ ಹೊರಡಲಿದೆ. ಮರುದಿನ ಬೆಳಿಗ್ಗೆ 9.05 ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.

Also Read  ಅರಂತೋಡು: ಎಸ್ಕೆಎಸ್ಸೆಸ್ಸೆಫ್ ಸ್ಥಾಪಕ ದಿನಾಚರಣೆ

ರೈಲು ಸಂಖ್ಯೆ 16585 ಬೆಂಗಳೂರು-ಮಂಗಳೂರು ಸೆಂಟ್ರಲ್ ತ್ರಿಸಾಪ್ತಾಹಿಕ ಎಕ್ಸ್​ಪ್ರೆಸ್​ ಮಾರ್ಗ ಮತ್ತು ಸಮಯ ಹೀಗಿದೆ. ಈ ಸೇವೆಯು ಮೈಸೂರಿನಿಂದ ರಾತ್ರಿ 11.15 ಕ್ಕೆ ಮತ್ತು ಹಾಸನದಿಂದ ಬೆಳಿಗ್ಗೆ 1.45 ಕ್ಕೆ ಹೊರಡುತ್ತದೆ. ಇದು ಕೆಂಗೇರಿ, ರಾಮನಗರ, ಚನ್ನಪಟ್ಟಣ, ಮಂಡ್ಯ, ಕೆಆರ್ ನಗರ, ಹೊಳೆನರಸೀಪುರ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕ, ಪುತ್ತೂರು, ಬಂಟ್ವಾಳ ಮತ್ತು ಮಂಗಳೂರು ಜಂಕ್ಷನ್​ನಲ್ಲಿ ವಾಣಿಜ್ಯ ನಿಲುಗಡೆಗಳನ್ನು ಹೊಂದಿದೆ.


ಮಂಗಳೂರಿನಿಂದ ಬೆಂಗಳೂರಿಗೆ ಹೊರಡುವ ರೈಲು ಸಂಖ್ಯೆ 06548 ವಿಶೇಷ ರೈಲು ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಸಂಜೆ 6.35 ಕ್ಕೆ ಮಂಗಳೂರು ಸೆಂಟ್ರಲ್​ನಿಂದ ಹೊರಟು ಮರುದಿನ ಬೆಳಿಗ್ಗೆ 6.15 ಕ್ಕೆ ಬೆಂಗಳೂರು ತಲುಪಲಿದೆ.

ರೈಲು ಸಂಖ್ಯೆ 16586 ಮಂಗಳೂರು ಸೆಂಟ್ರಲ್​ನಿಂದ ಬೆಂಗಳೂರಿಗೆ ತಲುಪುತ್ತದೆ. ಇದು ಹಾಸನದಿಂದ 12.40 ಕ್ಕೆ ಮತ್ತು ಮೈಸೂರಿನಿಂದ 3.15 ಕ್ಕೆ ಹೊರಡುತ್ತದೆ. ಆಗಸ್ಟ್ 31 ರವರೆಗೆ ಈ ರೈಲುಗಳ ಸೇವೆ ದೊರೆಯಲಿದೆ.

ಜುಲೈ 17 ರಿಂದ ಸಂಪರ್ಕ ಕಡಿತಗೊಂಡಾಗಿನಿಂದ ಕರಾವಳಿ ಮತ್ತು ಬೆಂಗಳೂರು ನಡುವೆ ವಿಶೇಷ ರೈಲುಗಳನ್ನು ಓಡಿಸಲು ಮತ್ತು ಅಸ್ತಿತ್ವದಲ್ಲಿರುವ ರೈಲುಗಳಿಗೆ ಹೆಚ್ಚುವರಿ ಕೋಚ್​ಗಳನ್ನು ಸೇರಿಸಲು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ರೈಲ್ವೆ ಇಲಾಖೆಯನ್ನು ಒತ್ತಾಯಿಸಿದ್ದರು. ಈ ಸಂಬಂಧ ಜುಲೈ 18ರಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಕಟೀಲ್ ಅವರು ಪತ್ರ ಬರೆದಿದ್ದರು.

Also Read  ಗಂಡಿಬಾಗಿಲು ಮದ್ರಸ ಎಸ್.ಕೆ.ಎಸ್.ಬಿ.ವಿ. ಮಹಾಸಭೆ ► ಅಧ್ಯಕ್ಷರಾಗಿ ಫಝಲ್, ಕಾರ್ಯದರ್ಶಿಯಾಗಿ ಮಹಮ್ಮದ್ ಸುಹೈಲ್ ಆಯ್ಕೆ

error: Content is protected !!
Scroll to Top