ಕಂಠಪೂರ್ತಿ ಕುಡಿದು ಬಂದು ತರಗತಿಯಲ್ಲಿ ಬಿದ್ದುಕೊಂಡ ಶಿಕ್ಷಕಿ ➤ ದಂಗಾದ ಶಿಕ್ಷಣಾಧಿಕಾರಿ

(ನ್ಯೂಸ್ ಕಡಬ) newskadaba.com ಛತ್ತೀಸ್‌ಗಢ, ಜು. 23. ಕಂಠಪೂರ್ತಿ ಕುಡಿದಿದ್ದ ಶಿಕ್ಷಕಿಯೋರ್ವಳು ತರಗತಿಯಲ್ಲಿ ಬಂದು ಬಿದ್ದುಕೊಂಡಿರುವ ಘಟನೆ ಟಿಕಾಯತ್‌ಗಂಜ್‌ನಲ್ಲಿ ನಡೆದಿದೆ.

ಕುಡಿದ ಅಮಲಿನಲ್ಲಿ ಶಿಕ್ಷಕಿ ಪ್ರಜ್ಞೆಯೇ ಇಲ್ಲದೆ ಬಿದ್ದುಕೊಂಡಿದ್ದು, ಮಕ್ಕಳು ಆರಾಮವಾಗಿ ಆಟವಾಡುತ್ತಿದ್ದರು. ಇನ್ನು ದುರಾದೃಷ್ಟವೆಂಬಂತೆ ಅದೇ ವೇಳೆ ಶಾಲೆಯ ಪರಿಶೀಲನೆಗೆ ಬಂದಿದ್ದು, ಕುಡಿದು ತರಗತಿಯಲ್ಲಿ ಮಲಗಿದ್ದ ಶಿಕ್ಷಕಿಯನ್ನು ನೋಡಿ ದಂಗಾಗಿದ್ದಾರೆ. ಮೊದಲು ಶಿಕ್ಷಣಾಧಿಕಾರಿ ಆಕೆಯ ಆರೋಗ್ಯ ಹದಗೆಟ್ಟಿರಬಹುದು ಎಂದುಕೊಂಡಿದ್ದರು ಆದರೆ ಮಕ್ಕಳು ಈಕೆ ದಿನಾ‌ ಕುಡಿದು ಬರುವ ಬಗ್ಗೆ ಅಧಿಕಾರಿಯ ಗಮನಕ್ಕೆ ತಂದಿದ್ದಾರೆ. ಶಿಕ್ಷಕಿಯ ಸ್ಥಿತಿಯನ್ನು ನೋಡಿದ ಶಿಕ್ಷಣಾಧಿಕಾರಿ ಕೂಡಲೇ ಎಎಸ್ಪಿಗೆ ಮಾಹಿತಿ ನೀಡಿದ್ದು, ಶಿಕ್ಷಕಿಯ ವೈದ್ಯಕೀಯ ಪರೀಕ್ಷೆಗೆ ಕಳುಹಿಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

Also Read  ಪಬ್ಜಿ ಆಟದಲ್ಲಿ ತಲ್ಲೀನರಾಗಿದ್ದ ಬಾಲಕರಿಗೆ ಗೂಡ್ಸ್ ಢಿಕ್ಕಿ ➤ ಇಬ್ಬರು ಮೃತ್ಯು

error: Content is protected !!
Scroll to Top