ಕಡಬ: ವರದಕ್ಷಿಣೆ ಕಿರುಕುಳ- ಹಲ್ಲೆ ➤ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಪುತ್ತೂರು, ಜು. 23. ವರದಕ್ಷಿಣೆ ರಹಿತ ವಿವಾಹ ಮಾಡಿಕೊಳ್ಳುವುದಾಗಿ ಪ್ರಚಾರಗಿಟ್ಟಿಸಿ ಬಳಿಕ ವರದಕ್ಷಿಣೆ ಪಡೆದು ಮದುವೆಯಾಗಿರುವ ವ್ಯಕ್ತಿಯೋರ್ವ ಇದೀಗ ಮತ್ತಷ್ಟು ವರದಕ್ಷಿಣೆ ತರುವಂತೆ ಮಾನಸಿಕ ಕಿರುಕುಳ ನೀಡಿ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.

ಹಲ್ಲೆಗೊಳಗಾದವರನ್ನು ರಾಮಕುಂಜ ಆತೂರು ಪೆರ್ಜಿ ನಿವಾಸಿ ಪಿ.ಹುಸೈನ್ ಮತ್ತು ಮೈಮುನಾ ದಂಪತಿ ಪುತ್ರಿ ಸೆಮೀಮಾ ಎಂದು ಗುರುತಿಸಲಾಗಿದೆ. ಇವರನ್ನು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಕುರಿತು ಸಮೀಮಾರವರು 2012ರ ಜೂ. 15ರಂದು ನನ್ನ ವಿವಾಹವು ಹಾಸನದ ಚಿಕ್ಕನಾಡು ಟಿ.ಎಚ್.ಇಮ್ರಾನ್ ಅವರೊಂದಿಗೆ ನಡೆದಿತ್ತು. ಇಮ್ರಾನ್ ವಧು ನೋಡಲು ಬಂದ ವೇಳೆ, ವರದಕ್ಷಿಣೆ ರಹಿತ ವಿವಾಹವಾಗುವುದಾಗಿ ನಂಬಿಸಿ ವಿವಾಹವಾಗಿ ಬಳಿಕ ವರದಕ್ಷಿಣೆ ಪಡೆದಿದ್ದರು. ಆ ಬಳಿಕ ಪದೇ ಪದೇ ನನಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಈ ಕುರಿತು ನನ್ನ ತವರು ಮನೆಗೆ ತಿಳಿಸದೇ ಇದ್ದಾಗ ರಾಜಿ ಮಾತುಕತೆ ನಡೆಸಲಾಗಿತ್ತಾದರೂ ಮತ್ತೆ ಮತ್ತೆ ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ತಮಗೆ ೨ ಹೆಣ್ಣು ಮತ್ತು ಒಂದು ಗಂಡು ಮಗುವಿದೆ. ಇದೀಗ ಗಂಡ ಇಮ್ರಾನ್, ಅತ್ತಿಗೆಯರಾದ ರೇಶ್ಮಾಬಾನು, ನಸೀಮ, ಇಲಿಯಾಸ್ ಬೇಗ್, ಪರ್ವೀಸ್ ಬಾನು ಹಾಗೂ ಅವರ ಮಗ ಫಯಾಜ್ ಪಾಶಾ ಮತ್ತು ಮನೆ ಮಂದಿ ಸೇರಿಕೊಂಡು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಜು. 21ರಂದು ಹಾಸನ ಮನೆಯಿಂದ ನನ್ನನ್ನು ಆತೂರು ಮನೆಗೆ ಕಳುಹಿಸಿದ್ದಾರೆ. ಅದೇ ದಿನ ರಾತ್ರಿ ನನ್ನ ಗಂಡ ಆತೂರು ಮನೆಗೆ ಬಂದು ನನಗೆ ಹಲ್ಲೆ ನಡೆಸಿದ್ದಾರೆ ಎಂದು ಸೆಮೀಮಾ ಆರೋಪಿಸಿದ್ದಾರೆ. ಘಟನೆಯ ಕುರಿತು ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  How to Activate Windows 11 on A Virtual Machine

error: Content is protected !!
Scroll to Top