ಬೆಳ್ಳಾರೆ ಮುಸ್ಲಿಂ ಯುವಕನ ಹತ್ಯೆ ➤ AIKMCC ಸುಳ್ಯ ಸಮಿತಿ ಖಂಡನೆ

(ನ್ಯೂಸ್ ಕಡಬ) newskadaba.com ಸುಳ್ಯ, ಜು. 22. ತಾಲೂಕಿನ ಕಳಂಜ ಎಂಬಲ್ಲಿ ಮಶೂದ್ ಎಂಬ ಯುವಕನ ಮೇಲೆ ಸಂಘಪರಿವಾರದ ಗೂಂಡಾ ಪಡೆ ಗಂಭೀರವಾಗಿ ದಾಳಿ ನಡೆಸಿ ಹತ್ಯೆ ಮಾಡಿದ ಘಟನೆ ಖಂಡನೀಯ. ಕೂಡಲೇ ಪೊಲೀಸ್ ಅಧಿಕಾರಿಗಳು ನೈಜ ಅಪರಾಧಿಗಳು ಹಾಗೂ ಅವರಿಗೆ ಪ್ರಚೋದನೆ ನೀಡಿದವವರನ್ನು ಬಂಧಿಸಬೇಕೆಂದು ಸುಳ್ಯ ತಾಲೂಕು AIKMCC ಸಮಿತಿಯು ಒತ್ತಾಯಿಸಿದೆ.


ಸಂಘ ಪರಿವಾರದ ಮುಖಂಡರು ಅಶಾಂತಿ ವಾತಾವರಣ ಸೃಷ್ಟಿ ಮಾಡುವ ದುರುದ್ದೇಶವಿಟ್ಟುಕೊಂಡು ಯುವಕರನ್ನು ಹುರಿದುಂಬಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಮತ್ತು ಸರಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಅಪರಾಧಿಗಳು ಮತ್ತು ಅವರಿಗೆ ಪ್ರಚೋದನೆ ನೀಡಿದವರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಸಂತ್ರಸ್ತ ಕುಟುಂಬಕ್ಕೆ ಶೀಘ್ರವೇ ಪರಿಹಾರ ಮತ್ತು ನ್ಯಾಯ ದೊರಕಿಸಿಕೊಡಬೇಕೆಂದು ಸುಳ್ಯ ವಲಯ AIKMCC ಅಧ್ಯಕ್ಷರಾದ ಖಲಂದರ್ ಎಲಿಮಲೆ ಪ್ರ.ಕಾರ್ಯದರ್ಶಿ ತಾಜುದ್ದೀನ್ ಟರ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  “ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ತಳಮಟ್ಟದ ಕೌಶಲ್ಯಅಭಿವೃದ್ಧಿ ಅವಶ್ಯ”– ವೇದವ್ಯಾಸ ಕಾಮತ್ 

error: Content is protected !!
Scroll to Top