(ನ್ಯೂಸ್ ಕಡಬ) newskadaba.com ಮಂಗಳೂರು, ಜು. 19. ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೊಡಗು ಜಿಲ್ಲೆಯ ಗಡಿಭಾಗಗಳಾದ ಸಂಪಾಜೆ, ಚೆಂಬು, ಅರಂತೋಡು, ತೊಡಿಕಾನ, ಕೊಡಗು ಸಂಪಾಜೆ, ಪೆರಾಜೆ ಭಾಗಗಳಲ್ಲಿ ಪದೇ ಪದೇ ಉಂಟಾಗುತ್ತಿರುವ ಭೂಕಂಪನದಿಂದ ಹಲವು ಮನೆಗಳು ಬಿರುಕುಬಿಟ್ಟಿದ್ದು, ಸರ್ಕಾರದಿಂದ ಇನ್ನೂ ಕೂಡ ಯಾವುದೇ ಪರಿಹಾರ ಸಿಕ್ಕಿಲ್ಲ. ಮುಖ್ಯಮಂತ್ರಿಗಳು, ಸಚಿವರು, ಅಧಿಕಾರಿಗಳು ಭೇಟಿ ಕೊಟ್ಟರೂ ಏನೂ ಪ್ರಯೋಜನವಾಗಿಲ್ಲ. ಆದ್ದರಿಂದ ಭೂಕಂಪನದಿಂದ ಬಿರುಕು ಬಿಟ್ಟಿರುವ ಮನೆಗಳಿಗೆ ತಕ್ಷಣವೇ ಪರಿಹಾರವನ್ನು ನೀಡಲು ರಾಜ್ಯ ಸರ್ಕಾರಕ್ಕೆ ಒತ್ತಾಯಿಸುವಂತೆ ಕರ್ನಾಟಕ ವಿಧಾನ ಸಭೆಯ ವಿರೋಧಪಕ್ಷದ ಉಪನಾಯಕರಾದ ಯು.ಟಿ.ಖಾದರ್ ಅವರಿಗೆ ಕೆ.ಪಿ.ಸಿ.ಸಿ.ಮಾಧ್ಯಮ ವಕ್ತಾರರು ಹಾಗೂ ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಶೌವಾದ್ ಗೂನಡ್ಕರವರು ಮಂಗಳೂರಿನಲ್ಲಿ ಮನವಿಯನ್ನು ಮಾಡಿದರು.
ಮನವಿಗೆ ಸ್ಪಂದಿಸಿದ ಯು.ಟಿ.ಖಾದರ್ ಅವರು, ಇದರ ಬಗ್ಗೆ ವಿಶೇಷ ಮುತುವರ್ಜಿಯನ್ನು ವಹಿಸಿ ಪರಿಹಾರಕ್ಕಾಗಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸುವುದಾಗಿ ತಿಳಿಸಿದರು. ಈ ವೇಳೆ ಜಿ.ಜಿ.ನವೀನ್ ಕುಮಾರ್, ರವಿಚಂದ್ರ ಮುನ್ನ, ಸಫ್ವಾನ್, ಹೇಮನಾಥ್ ಮೊದಲಾದವರು ಜೊತೆಗಿದ್ದರು.