ಭಾರೀ ಪ್ರವಾಹದಿಂದಾಗಿ ನೀರಿನಲ್ಲಿ ಕೊಚ್ಚಿಹೋದ ಶಾಲಾ ಬಸ್..!! ➤ ಇಬ್ಬರು ಗಂಭೀರ

(ನ್ಯೂಸ್ ಕಡಬ) newskadaba.com ನವದೆಹಲಿ, ಜು. 19. ಶಾಲಾ ಮಕ್ಕಳನ್ನು ಹತ್ತಿಸಿಕೊಳ್ಳಲು ಹೋಗುತ್ತಿದ್ದ ಶಾಲಾ ಬಸ್ಸೊಂದು ನೀರಿನಲ್ಲಿ ಕೊಚ್ಚಿಹೋದ ಘಟನೆ ಉತ್ತರಾಖಂಡದ ಚಂಪಾವತ್ ನಲ್ಲಿ ನಡೆದಿದೆ.

ಘಟನೆಯಲ್ಲಿ ಶಾಲಾ ಬಸ್ ಚಾಲಕ ಕಮಲೇಶ್ ಕರ್ಕಿ ಹಾಗೂ ಮತ್ತೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಅದೃಷ್ಟವಶಾತ್ ಬಸ್ ನಲ್ಲಿ ಮಕ್ಕಳಿರದೇ ಇದ್ದುದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ನೀರಿನ ಹರಿವು ಹೆಚ್ಚಿರುವುದರಿಂದ ಚಾಲಕನಿಗೆ ಸ್ವಲ್ಪ ಸಮಯ ಕಾಯಲು ಹೇಳಲಾಗಿತ್ತಾದರೂ, ಆತ ನೀರು ತುಂಬಿ ಹರಿಯುತ್ತಿದ್ದ ರಸ್ತೆಯಲ್ಲೇ ಬಸ್ ಚಲಾಯಿಸಿದ್ದ. ಈ ವೇಳೆ ನೀರಿನ ರಭಸಕ್ಕೆ ಬಸ್ ಮಗುಚಿ ಬಿದ್ದಿದ್ದು, ನದಿಯಲ್ಲಿ ಸ್ವಲ್ಪ ದೂರ ಕೊಚ್ಚಿಕೊಂಡು ಹೋಗಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

Also Read  ➤ಮಂಗಳೂರು ಹಲವು ಪ್ರಖರಣಗಳಲ್ಲಿ ಬೇಕಾಗಿದ್ದ ಮೋಸ್ಟ್ ವಾಟೆಂಡ್ ಬಂಧನ

error: Content is protected !!
Scroll to Top