ಕಡಬ: ನೂತನ ಕಂದಾಯ ನಿರೀಕ್ಷಕರಾಗಿ ಪೃಥ್ವಿರಾಜ್ ನೇಮಕ

(ನ್ಯೂಸ್ ಕಡಬ) newskadaba.com ಕಡಬ, ಜು. 19. ಕಡಬ ಹೋಬಳಿಯ ನೂತನ ಕಂದಾಯ ನಿರೀಕ್ಷಕರಾಗಿ ಪೃಥ್ವಿರಾಜ್ ಅವರನ್ನು ನೇಮಿಸಿ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಹರೀಶ್ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.


ಈ ಮೊದಲು ಕಂದಾಯ ನಿರೀಕ್ಷಕರಾಗಿದ್ದ ಅವಿನ್ ಕುಮಾರ್ ರಂಗತ್ತಮಲೆ ಅವರನ್ನು ಬೆಳ್ತಂಗಡಿ ತಾಲೂಕು ಕಛೇರಿಗೆ ವರ್ಗಾವಣೆಗೊಳಿಸಿ, ಆ ಜಾಗಕ್ಕೆ ಬೆಳ್ತಂಗಡಿ ತಾಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕರಾಗಿದ್ದ ಪೃಥ್ವಿರಾಜ್ ಅವರನ್ನು ಸರ್ಕಾರ ನೇಮಿಸಿದೆ. ಇವರು ಈ ಹಿಂದೆ ಕೊಂಬಾರು ಗ್ರಾಮ ಕರಣಿಕರಾಗಿ ಕರ್ತವ್ಯ ನಿರ್ವಹಿಸಿ ಬಳಿಕ ಭಡ್ತಿ ಹೊಂದಿದ್ದರು.

Also Read  ಜೂನ್‌ 5ರಂದು ನಗರದ ಹಲವೆಡೆ ವಿದ್ಯುತ್‌ ನಿಲುಗಡೆ

error: Content is protected !!
Scroll to Top