ಸುಳ್ಯ: ಕಾಡಾನೆ ಹಿಂಡು ದಾಳಿ ➤ ಅಪಾರ ಕೃಷಿ ಹಾನಿ

(ನ್ಯೂಸ್ ಕಡಬ) newskadaba.com ಸುಳ್ಯ, ಜು. 19. ಕಾಡಾನೆಗಳ ಹಾವಳಿ ಮುಂದುವರಿದಿದ್ದು, ಸೋಮವಾರ ಬೆಳಿಗ್ಗೆ ಮಾವಂಜಿ ಭಾಗದಲ್ಲಿ ಪ್ರತ್ಯಕ್ಷಗೊಂಡ ಕಾಡಾನೆಗಳ ಹಿಂಡು ಕೃಷಿ ಹಾನಿ ಮಾಡಿ ಅಪಾರ ನಷ್ಟವುಂಟಾದ ಘಟನೆ ವರದಿಯಾಗಿದೆ.

ಒಂದು ಮರಿ ಹಾಗು ಮೂರು ದೊಡ್ಡ ಆನೆಗಳ ಹಿಂಡು ಸೀತಾರಾಮ ಮಣಿಯಾಣಿ ಎಂಬವರ ತೋಟಕ್ಕೆ ನುಗ್ಗಿ ಬಾಳೆ, ತೆಂಗು ಸೇರಿ ಅಪಾರ ಕೃಷಿ ಹಾನಿಗೊಳಿಸಿದೆ. ಮಂಡೆಕೋಲು ಗ್ರಾಮದಲ್ಲಿ ಕಾಡಾನೆ ಹಾಳಿ ನಿರಂತರವಾಗಿ ಮುಂದುವರಿದಿದ್ದು ಮಳೆಗಾಲ ಆರಂಭವಾದ ಬಳಿಕ ಆನೆ ಹಾವಳಿ ಇನ್ನಷ್ಟು ತೀವ್ರಗೊಂಡಿದೆ.

Also Read  ಅನಾರೋಗ್ಯದಿಂದ ಬಳಲುತ್ತಿದ್ದ ಮಧ್ಯಪ್ರದೇಶ ರಾಜ್ಯಪಾಲ ಟಂಡನ್ ವಿಧಿವಶ

error: Content is protected !!
Scroll to Top