ಮಡಿಕೇರಿ- ಮಂಗಳೂರು ಸಂಪರ್ಕದ ಪರ್ಯಾಯ ರಸ್ತೆಗೂ ಕುಸಿತದ ಭೀತಿ..!! ➤ ಸಂಚಾರ ನಿರ್ಬಂಧ

(ನ್ಯೂಸ್ ಕಡಬ) newskadaba.com ಸುಳ್ಯ, ಜು. 19. ಮಡಿಕೇರಿ-ಮಂಗಳೂರು ಪರ್ಯಾಯ ರಸ್ತೆಗೂ ಕುಸಿತದ ಭೀತಿ ಎದುರಾಗಿದ್ದು ಮಡಿಕೇರಿ ಪೊಲೀಸರು ತಾಳತ್ತಮನೆ ಸಮೀಪ ಬ್ಯಾರಿಕೇಡ್ ಅಳವಡಿಸಿ ರಸ್ತೆ ಬಂದ್ ಮಾಡಿದ ಪರಿಣಾಮ ಮಂಗಳೂರಿನಿಂದ ಮಡಿಕೇರಿ ಮೂಲಕ ಬೆಂಗಳೂರು, ಮೈಸೂರು, ಮಡಿಕೇರಿ ಮತ್ತಿತರ ಸ್ಥಳಗಳಿಗೆ ಹೊರಟ ಎಲ್ಲ ಪ್ರಯಾಣಿಕರು ಇದೀಗ ಸಂಪಾಜೆಯ ಗೇಟ್ ಬಳಿ ಸಿಲುಕಿಕೊಂಡಿದ್ದಾರೆ. ಸಂಪಾಜೆ ಗೇಟ್ ಬಂದ್ ಮಾಡಲಾಗಿದ್ದು ಯಾವುದೇ ವಾಹನವನ್ನು ಮಡಿಕೇರಿ ಕಡೆಗೆ ಬಿಡುತ್ತಿಲ್ಲ ಎಂದು ತಿಳಿದು ಬಂದಿದೆ.

ಮಡಿಕೇರಿ –ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಡಿಕೇರಿ ಸಮೀಪದ ಜಿಲ್ಲಾಧಿಕಾರಿ ಕಚೇರಿ ಬಳಿ ಕುಸಿಯುವ ಭೀತಿಯಲ್ಲಿರುವ ಹಿನ್ನೆಲೆ ಆ ಮಾರ್ಗದಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ದೂರದ ಊರಿಗೆ ಪ್ರಯಾಣ ಬಳಸುವವರಿಗೆ ತಾತ್ಕಾಲಿಕವಾಗಿ ತಾಳತ್ತಮನೆ ಮೂಲಕ ಮೇಕೇರಿಯಿಂದ ಮಡಿಕೇರಿಗೆ ಸಂಪರ್ಕ ಕಲ್ಪಿಸಲಾಗಿದೆ. ಇದೀಗ ಮೆಕೇರಿ ಬಳಿ ರಸ್ತೆಯೂ ಕುಸಿತದ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ವಾಹನ ಸಂಚಾರ ಮಾಡದಂತೆ ತಡೆ ಹಿಡಿದಿದ್ದಾರೆ ಎನ್ನಲಾಗಿದೆ.

Also Read  ಹತೋಟಿಗೆ ಬಾರದ ಪ್ರತಿಭಟನೆಯ ಕಿಚ್ಚು ➤ ಮಂಗಳೂರಿನಲ್ಲಿ ಕರ್ಫ್ಯೂ ಜಾರಿ

error: Content is protected !!
Scroll to Top