ಮಂಗಳೂರು ಏರ್ಪೋರ್ಟ್ ಗೆ ಬಂದಿಳಿದ ಕೇರಳದ ಪ್ರಯಾಣಿಕನಲ್ಲಿ ಮಂಕಿಫಾಕ್ಸ್ ಪತ್ತೆ ➤ 35 ಮಂದಿಗೆ ಐಸೋಲೇಷನ್..!!

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 19. ವಿದೇಶದಿಂದ ಮಂಗಳೂರಿಗೆ ಆಗಮಿಸಿದ ಕೇರಳದ ಪ್ರಯಾಣಿಕನೋರ್ವನಲ್ಲಿ ಮಂಕಿಪಾಕ್ಸ್ ಲಕ್ಷಣ ಕಂಡುಬಂದ ಹಿನ್ನೆಲೆ, ವ್ಯಕ್ತಿಯ ಸಂಪರ್ಕಕ್ಕೆ ಬಂದ 35 ಮಂದಿಯನ್ನು ಐಸೋಲೇಷನ್ ಗೆ ಒಳಪಡಿಸಲಾಗಿದೆ.

ಪ್ರಯಾಣಿಕನಲ್ಲಿ ಮಂಕಿಫಾಕ್ಸ್ ರೋಗಲಕ್ಷಣ ಕಾಣಿಸಿಕೊಂಡ ಹಿನ್ನೆಲೆ ಆತನನ್ನು ಪೆರಿಯಾರಂ ಮೆಡಿಕಲ್ ಕಾಲೇಜಿನ ಆಸ್ಪತ್ರೆಗೆ ದಾಖಲಿಸಿ, ತಪಾಸಣೆ ನಡೆಸಿದಾಗ ಮಂಕಿಫಾಕ್ಸ್ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಈತನ ಮಾದರಿ ಸಂಗ್ರಹಿಸಿ ಪುಣೆಯಲ್ಲಿರುವ ವೈರಾಲಜಿ ಕೇಂದ್ರಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ. ಮಾತ್ರವಲ್ಲದೆ ಯುವಕನನ್ನು ಐಸೋಲೇಶನ್‌ಗೆ ಒಳಪಡಿಸಲಾಗಿದ್ದು ನಿಗಾ ಇರಿಸಲಾಗಿದೆ. ಇನ್ನು ಮಂಗಳೂರಿಗೆ ಆಗಮಿಸಿದ ಕೇರಳದ ವ್ಯಕ್ತಿಯ ಸಂಪರ್ಕಕ್ಕೆ ಬಂದಿರುವ ಸಹ ಪ್ರಯಾಣಿಕರನ್ನು ಕೂಡಾ ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಐಸೋಲೇಷನ್ ನಲ್ಲಿರುವಂತೆ ಸೂಚಿಸಲಾಗಿದೆ.

Also Read  ಹಿರಿಯ ಪತ್ರಕರ್ತ ರವಿರಾಜ್ ವಳಳಾಂಬೆ ನಿಧನ

 

error: Content is protected !!
Scroll to Top