69ನೇ ಸೀನಿಯರ್ ಕಬಡ್ಡಿ ಪಂದ್ಯಾಟ ➤ ಕರ್ನಾಟಕ ರಾಜ್ಯ ತಂಡಕ್ಕೆ ಕಡಬದ ಮಹಮ್ಮದ್ ಅಫ್ರಿದಿ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಜು.19. ಆಲ್ ಇಂಡಿಯಾ ಕಬಡ್ಡಿ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ಜು.21ರಿಂದ ಹರಿಯಾಣದಲ್ಲಿ ನಡೆಯಲಿರುವ 69ನೇ ಸೀನಿಯರ್ ಪುರುಷರ ಕಬಡ್ಡಿ, ಪಂದ್ಯಾಟಕ್ಕೆ ಕಡಬ ಹೊಸ್ಮಠದ ಮಹಮ್ಮದ್ ಅಫ್ರಿದಿಯವರು ಕರ್ನಾಟಕ ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಖ್ಯಾತ ಕಬಡ್ಡಿ ಆಟಗಾರರಾದ ಸುಕೇಶ್ ಹೆಗ್ಡೆ, ಪ್ರಶಾಂತ್ ರೈ ಕೈಕಾರ ಮೊದಲಾದ ಆಟಗಾರರನ್ನೊಳಗೊಂಡ ರಾಜ್ಯ ತಂಡವನ್ನು ಮಹಮ್ಮದ್‌ ಅಫ್ರಿದಿ ಪ್ರತಿನಿಧಿಸಲಿದ್ದಾರೆ. ಮಂಗಳೂರು, ಮೈಸೂರು, ಬೆಂಗಳೂರಿನಲ್ಲಿ ವಿವಿಧ ಪ್ರೊ ಕಬಡ್ಡಿ ಪಂದ್ಯಾಟಗಳಲ್ಲಿ ಆಟವಾಡಿದ್ದ ಮಹಮ್ಮದ್‌ ಅಫ್ರಿದಿಯವರು ಪ್ರಸ್ತುತ ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಹೊಸ್ಮಠ ನಿವಾಸಿ ಕರೀಮ್ ಹಾಗೂ ಅಸ್ಮಾ ದಂಪತಿಯ ಪುತ್ರ. ಇವರ ಸಹೋದರ ಹುಸೈನ್ ಅಜ್ಜಲ್‌ ಅವರೂ ಕಬಡ್ಡಿ ಆಟಗಾರನಾಗಿದ್ದು ವಿವಿಧ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ.

Also Read  ದೇವಸ್ಥಾನದಲ್ಲೇ ಮೂವರ ಹತ್ಯೆ ➤ ಹುಂಡಿ ದೋಚಿ ಪರಾರಿಯಾದ ದುಷ್ಕರ್ಮಿಗಳು

 

 

error: Content is protected !!
Scroll to Top