ನರ್ಮದಾ ನದಿಗೆ ಬಿದ್ದ ಬಸ್ ➤ 12 ಮಂದಿ ದುರ್ಮರಣ

(ನ್ಯೂಸ್ ಕಡಬ) newskadaba.com ಮಧ್ಯಪ್ರದೇಶ, ಜು. 18. ಸೇತುವೆಯ ಮೇಲಿಂದ ನರ್ಮದಾ ನದಿಗೆ ಮಹಾರಾಷ್ಟ್ರದ ಬಸ್ ವೊಂದು ಉರುಳಿ ಬಿದ್ದು 12 ಪ್ರಯಾಣಿಕರು ಮೃತಪಟ್ಟ ಘಟನೆ ಮಧ್ಯ ಪ್ರದೇಶದ ಧರ್ ಜಿಲ್ಲೆಯಲ್ಲಿ ಇಂದು ಬೆಳಂಬೆಳಗ್ಗೆ ನಡೆದಿದೆ.


ಇಂದೋರ್’ನಿಂದ ಪುಣೆಗೆ ತೆರಳುತ್ತಿದ್ದ ಬಸ್ ಖಲ್ಘಾಟ್ ಸಂಜಯ್ ಸೇತುವೆಯಿಂದ ನರ್ಮದಾ ನದಿಗೆ ಉರುಳಿ ಬಿದ್ದಿದೆ. ಪರಿಣಾಮ 12 ಮಂದಿ ಮೃತಪಟ್ಟಿದ್ದು, 15 ಮಂದಿಯನ್ನು ರಕ್ಷಿಸಲಾಗಿದೆ ಎಂದು ಮಧ್ಯ ಪ್ರದೇಶದ ಸಚಿವ ನರೋತ್ತಮ್ ಮಿಶ್ರಾ ತಿಳಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ.

Also Read  ಅಮಲು ಪದಾರ್ಥ ನೀಡಿ ನಗ-ನಗದು ದೋಚಿದ ಅಪರಿಚಿತರು ► ಕಂಗಾಲಾದ ಉಡುಪಿ ರೈಲ್ವೇ ಯಾತ್ರಿ ಸಂಘದ ಪದಾಧಿಕಾರಿ

error: Content is protected !!
Scroll to Top