ಐತ್ತೂರು: ಕೊರಂ ಕೊರತೆಯ ನಡುವೆಯೇ ಗ್ರಾಮಸಭೆಗೆ ಮುಂದಾದ ಪಿಡಿಒ ➤ ಸಭೆಯಿಂದ ಹೊರನಡೆದ ಸದಸ್ಯರು ಹಾಗೂ ಗ್ರಾಮಸ್ಥರು..!!!

(ನ್ಯೂಸ್ ಕಡಬ) newskadaba.com ಕಡಬ, ಜು. 18. ಕೊರಂ ಕೊರತೆ ಇದ್ದರೂ ಐತ್ತೂರು ಗ್ರಾಮ ಪಂಚಾಯತ್ ಪಿಡಿಒ, ಗ್ರಾಮ ಸಭೆಯನ್ನು ಒತ್ತಡದಿಂದ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಗ್ರಾ.ಪಂ. ಉಪಾಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಸಭೆಯಿಂದ ಹೊರ‌ ನಡೆದ ಘಟನೆ ನಡೆದಿದೆ.

ಗ್ರಾಮಸ್ಥರು ಹೊರ ಹೋಗುವುದನ್ನು ಕಂಡ ಉಪಾಧ್ಯಕ್ಷರು ಹಾಗೂ ನಾಲ್ವರು ಸದಸ್ಯರು ಹೊರ ನಡೆದು ಪಂಚಾಯತ್ ಕಛೇರಿಯಲ್ಲಿ ಕುಳಿತಿದ್ದಾರೆ. ಈ ಹಿನ್ನೆಲೆ ಸ್ಥಳದಲ್ಲಿ ಗೊಂದಲವೇರ್ಪಟ್ಟಿದ್ದು, ಸಭೆಗೆ ಕಡಬ ಎಸ್.ಐ. ಆಂಜನೇಯ ರೆಡ್ಡಿ ಹಾಗೂ ಸಿಬಂದಿಗಳು ಆಗಮಿಸಿದ್ದಾರೆ. ಇದರ ನಡುವೆ ಗ್ರಾಮಸ್ಥರು ಹತ್ತು ಮಂದಿ ಇದ್ದರೂ, ಪಿಡಿಒ ಮಾತ್ರ ಹಠಮಾರಿ ಧೋರಣೆಯಿಂದ ಕಾಟಾಚಾರಕ್ಕೆ ಗ್ರಾಮ ಸಭೆ ನಡೆಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Also Read  What Is a Board Room Review?

error: Content is protected !!
Scroll to Top