ಅಪ್ರಾಪ್ತ ಬಾಲಕಿಯ ಮಾನಭಂಗಕ್ಕೆ ಯತ್ನ ➤ ಆರೋಪಿ ಅರೆಸ್ಟ್..!!

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 18. ಅಪ್ರಾಪ್ತೆಗೆ ಫೋನ್ ಮಾಡುವಂತೆ ಪೀಡಿಸುತ್ತಿದ್ದಲ್ಲದೇ, ಯಾರು ಇಲ್ಲದ ವೇಳೆ ಮನೆಗೆ ನುಗ್ಗಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ನಗರದ ಮಹಿಳಾ ಠಾಣೆ ಪೊಲೀಸರು ಬಂಧಿಸಿದ ಘಟನೆ ವರದಿಯಾಗಿದೆ.

ಬಂಧಿತ ಆರೋಪಿಯನ್ನು ಪಂಜಿಮೊಗರಿನ ಮುಸ್ತಫಾ (35) ಎಂದು ಗುರುತಿಸಲಾಗಿದೆ. ಕಾವೂರು ಠಾಣಾ ವ್ಯಾಪ್ತಿಯ ಶಾಂತಿನಗರದ ತರಕಾರಿ ಅಂಗಡಿಯಲ್ಲಿ ಕೆಲಸಕ್ಕಿದ್ದ ಈತನ ಅಂಗಡಿಗೆ ಅಪ್ರಾಪ್ತ ವಿದ್ಯಾರ್ಥಿನಿ ತರಕಾರಿ ತರಲೆಂದು ಹೋದಾಗ ಮಾಡುವಂತೆ ಪೀಡಿಸುತ್ತಿದ್ದನು ಎಂದೆನ್ನಲಾಗಿದೆ. ಅಲ್ಲದೇ ಜು. 08ರಂದು ರಾತ್ರಿ ಬಾಲಕಿ ಮನೆಯಲ್ಲೇ ಒಬ್ಬಳೇ ಇದ್ದಾಗ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಮಾನಭಂಗಕ್ಕೆ ಯತ್ನಿಸಿ, ಕೃತ್ಯವನ್ನು ಇತರರಿಗೆ ಹೇಳಿದರೆ ಜೀವಸಹಿತ ಬಿಡುವುದಿಲ್ಲ ಎಂದು ಬೆದರಿಕೆಯೊಡ್ಡಿರುವುದಾಗಿ ದೂರು ದಾಖಲಾಗಿದೆ. ಅದರಂತೆ ಪ್ರಕರಣ ದಾಖಲಿಸಿಕೊಂಡ ಮಹಿಳಾ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Also Read  ದ.ಕ ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ನಡೆಯಲಿರುವ ವಿಶೇಷ ಆರೋಗ್ಯ ತಪಾಸಣಾ ಶಿಬಿರ

error: Content is protected !!
Scroll to Top