ಅಮೀರ್ ಬನ್ನೂರು ಅವರಿಗೆ ಕರುನಾಡು ಚೇತನ ಪ್ರಶಸ್ತಿ ಪ್ರದಾನ

(ನ್ಯೂಸ್ ಕಡಬ) newskadaba.com ಜು. 18. ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಚೇತನ ಫೌಂಡೇಶನ್ ಕರ್ನಾಟಕ (ರಿ) ಇದರ ಸಹಯೋಗದಲ್ಲಿ ಕನಕ ಭವನ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ನಡೆದ ಧಾರವಾಡ ನುಡಿ ಸಡಗರ ಸಮಾವೇಶದಲ್ಲಿ ಯುವ ಸಾಹಿತಿ, ಖಿದ್ಮಾ ಫೌಂಡೇಶನ್ ಕರ್ನಾಟಕ ರಾಜ್ಯ ಸಂಚಾಲಕರಾದ ಆಮಿರ್ ಬನ್ನೂರು ಅವರಿಗೆ ಕರುನಾಡ ಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿಯನ್ನು ಪ್ರೊ ಕೆ.ಬಿ ಗುಡಸಿ ಕುಲಪತಿಗಳು ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಪ್ರೊ ನಿಜಲಿಂಗಪ್ಪ ಮಟ್ಟಿಹಾಳ ಮುಖ್ಯಸ್ಥರು ಕರ್ನಾಟಕ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ನೀಡಿದರು ಕಾರ್ಯಕ್ರಮದಲ್ಲಿ ಯುವನಟ, ನಿರ್ದೇಶಕ ನಿಂಗರಾಜು ಸಿಂಗಾಡಿ ಚೇತನ ಫೌಂಡೇಶನ್ ಕರ್ನಾಟಕ ಅಧ್ಯಕ್ಷರಾದ ಚಂದ್ರಶೇಕರ ಮಾಡಲಗೇರಿ ಸೇರಿ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.

Also Read  ಮುರುಡೇಶ್ವರ - ಬೆಂಗಳೂರು ರೈಲು ಸೇವೆ 5 ತಿಂಗಳು ವಿಸ್ತರಣೆ

error: Content is protected !!
Scroll to Top