ರಬ್ಬರ್ ನಿಗಮದ ಕಾರ್ಮಿಕರಿಗೆ ಸಂಬಳ ವಿಳಂಬದ ಆರೋಪ ➤ ಹಾಲು ಸಾಗಾಟದ ಲಾರಿ ತಡೆದು ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಜು.16. ರಬ್ಬರ್ ಕಾರ್ಮಿಕರಿಗೆ ವಿಳಂಬವಾಗಿ ವೇತನ ನೀಡುವುದನ್ನು ವಿರೋಧಿಸಿ ರಬ್ಬರ್ ನಿಗಮದ ಕಾರ್ಮಿಕರು ಹಾಲು ಸಂಸ್ಕರಣಾ ಕಾರ್ಖಾನೆಯ ಮುಂಭಾಗದಲ್ಲಿ ರಬ್ಬರ್ ಸಾಗಾಟದ ಲಾರಿಯನ್ನು ತಡೆದು ಪ್ರತಿಭಟನೆ ನಡೆಸಿದ ಘಟನೆ ನೆಟ್ಟಣದಲ್ಲಿ ನಡೆದಿದೆ.

ರಬ್ಬರ್ ನಿಗಮದ ಕಾರ್ಮಿಕರಿಗೆ ಕಳೆದ ಮೂರು ತಿಂಗಳುಗಳಿಂದ ವೇತನ ಬಾಕಿ ಮಾಡಿರುವುದಾಗಿ ಆರೋಪಿಸಿದ ಕಾರ್ಮಿಕರು ರಬ್ಬರ್ ಹಾಲು ಸಾಗಾಟದ ಲಾರಿಯನ್ನು ತಡೆದು ಪ್ರತಿಭಟನೆ ನಡೆಸಿದರು. ಈ ವೇಳೆ ಸ್ಥಳಕ್ಕಾಗಮಿಸಿದ ರಬ್ಬರ್ ನಿಗಮದ ಸುಬ್ರಹ್ಮಣ್ಯ ವಿಭಾಗದ ಕೊಣಾಜೆ ಘಟಕದ ತೋಟದ ಅಧೀಕ್ಷಕರಾದ ಸ್ನೇಹಾ, ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ ಸೋಮವಾರದಂದು ವೇತನ ಪಾವತಿ ಮಾಡುವುದಾಗಿ ಭರವಸೆ ನೀಡಿದ ಕಾರಣ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು.

Also Read  ಪ್ರವಾಸಿ ಸ್ವಯಂ ಉದ್ಯೋಗ ಯೋಜನೆಗೆ (ಕೇರಳ ಮಾದರಿ) ಅರ್ಜಿ ಆಹ್ವಾನ

 

 

error: Content is protected !!
Scroll to Top