ಶಿರಾಡಿ ಘಾಟ್ ನಲ್ಲಿ ಹೆದ್ದಾರಿ ಕುಸಿತ ➤ ಘನ ವಾಹನ ಸಂಚಾರ ಸ್ಥಗಿತ, ಸಾಲುಗಟ್ಟಿ ನಿಂತ ವಾಹನಗಳು

(ನ್ಯೂಸ್ ಕಡಬ) newskadaba.com ಸಕಲೇಶಪುರ, ಜು.14. ಶಿರಾಡಿ ಘಾಟ್‌ನಲ್ಲಿ ಮತ್ತೆ ಭೂಕುಸಿತಗೊಂಡ ಹಿನ್ನೆಲೆಯಲ್ಲಿ ಘನ ವಾಹನಗಳ ಸಂಚಾರ ನಿಷೇಧಿಸಿ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಸಕಲೇಶಪುರ ತಾಲ್ಲೂಕಿನ ದೋಣಿಗಲ್ ಸಮೀಪ ಕಳೆದ ವರ್ಷ ಹೆದ್ದಾರಿ ಕುಸಿತಗೊಂಡ ಅಲ್ಪ ದೂರದಲ್ಲೇ ವಾರದ ಹಿಂದೆ ರಸ್ತೆ ಕುಸಿದಿದ್ದು, ಇಂದು ಮತ್ತೆ ಭೂ ಕುಸಿತಗೊಂಡು ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಲಾರಿ ಸೇರಿದಂತೆ ಘನ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದ್ದು, ಲಘು ವಾಹನಗಳನ್ನು ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

Also Read  ತಾಯಿಯ ಮರಣ ಪ್ರಮಾಣ ಪತ್ರ ಕೇಳಿದ ಮಗಳಿಗೆ ಬಿಗ್ ಶಾಕ್..!!   ➤ಅಧಿಕಾರಿಯ ಮೇಲೆ ನೆಟ್ಟಿಗರ ಆಕ್ರೋಶ

 

error: Content is protected !!
Scroll to Top