ಇನ್ನುಮುಂದೆ ಶನಿವಾರದಂದು ಫುಲ್ ಕ್ಲಾಸ್…!!

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 13. ಕರಾವಳಿಯಾದ್ಯಂತ ಮಳೆಯ ಆರ್ಭಟದ ಹಿನ್ನೆಲೆ ಕಳೆದೊಂದು ವಾರದಿಂದ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಆದರೆ ಇದೀಗ, ರಜೆಗಳನ್ನು ಸರಿದೂಗಿಸಲು ಮುಂದಿನ ಆರು ವಾರಗಳ ಕಾಲ ಶನಿವಾರ ಪೂರ್ಣ ದಿನ ತರಗತಿಗಳನ್ನು ನಡೆಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಮೌಖಿಕ ಸೂಚನೆ ನೀಡಿದೆ ಎನ್ನಲಾಗಿದೆ.

ಸಾಮಾನ್ಯವಾಗಿ ಶಾಲೆಗಳು ಜೂನ್ 1ರಂದು ಆರಂಭವಾಗುತ್ತವೆ. ಆದರೆ, ಈ ವರ್ಷ ಮೇ ಎರಡನೇ ವಾರದಲ್ಲಿ ಪ್ರಾರಂಭವಾಗಿದೆ. ಅಂದರೆ ಪ್ರಸ್ತುತ ಶೈಕ್ಷಣಿಕ ವರ್ಷವು ಇತರ ಶೈಕ್ಷಣಿಕ ವರ್ಷಗಳಿಗೆ ಹೋಲಿಸಿದರೆ 15 ದಿನಗಳ ಮುಂಚಿತವಾಗಿ ಪ್ರಾರಂಭವಾಗಿದೆ. ಆದ್ದರಿಂದ, ಒಂದು ವಾರ ರಜೆ ಕೊಟ್ಟಿರುವುದು ತರಗತಿಯ ಮೇಲೆ ಯಾವುದೇ ದೊಡ್ಡ ಮಟ್ಟದ ಪರಿಣಾಮ ಬೀರುವುದಿಲ್ಲ. ಆದರೂ ಕಳೆದುಹೋದ ಅಧ್ಯಯನ ಸಮಯವನ್ನು ಸರಿದೂಗಿಸಲು ವಾರಾಂತ್ಯದಲ್ಲಿ ವ್ಯವಸ್ಥೆ ಮಾಡಲು ಸಾರ್ವಜನಿಕ ಶಿಕ್ಷಣ ಇಲಾಖೆಯು (ಡಿಪಿಐ) ಶಾಲೆಗಳಿಗೆ ಮೌಖಿಕ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.

Also Read  ಮಗಳಿಗೆ ನಿರಂತರ ಲೈಂಗಿಕ ದೌರ್ಜನ್ಯವೆಸಗುತ್ತಿದ್ದ ಕಾಮುಕ ತಂದೆ ➤ ಕೊಚ್ಚಿಕೊಂದ ಮಗಳ ಸ್ನೇಹಿತರು..!

error: Content is protected !!
Scroll to Top