ಬೈತಡ್ಕ: ಕಾರು ಅಪಘಾತ ಪ್ರಕರಣ ➤ ಎರಡೂ ಮೃತದೇಹಗಳು ಪತ್ತೆ – ಗೊಂದಲಗಳಿಗೆ ತೆರೆ

(ನ್ಯೂಸ್ ಕಡಬ) newskadaba.com ಕಡಬ, ಜು.12. ಶನಿವಾರ ತಡರಾತ್ರಿ ಸೇತುವೆಯಿಂದ ಕೆಳಕ್ಕೆ ಕಾರು ಬಿದ್ದು ನಾಪತ್ತೆಯಾಗಿದ್ದ ಯುವಕರಿಬ್ಬರ ಮೃತದೇಹವು ಮಂಗಳವಾರ ಬೆಳಿಗ್ಗೆ ಪತ್ತೆಯಾಗಿದೆ.

ಅಪಘಾತ ನಡೆದು 200 ಮೀ. ವ್ಯಾಪ್ತಿಯಲ್ಲಿ ಮೃತದೇಹವು ಮೊದಲು ಪತ್ತೆಯಾಗಿದ್ದು, ಸ್ವಲ್ಪ ಅಂತರದಲ್ಲೇ ಎರಡನೇ ಮೃತದೇಹ ಪತ್ತೆಯಾಗಿದೆ. ಈ ಮೂಲಕ ಕಳೆದೆರಡು ದಿನಗಳಿಂದ ಮೂಡಿದ್ದಂತಹ ಗೊಂದಲಗಳಿಗೆ ತೆರೆ ಬಿದ್ದಂತಾಗಿದೆ. ಹೊಳೆಯಲ್ಲಿ ನೀರು ಕಡಿಮೆಯಾದ ಹಿನ್ನೆಲೆಯಲ್ಲಿ ಮೃತದೇಹವನ್ನು ಸುಲಭವಾಗಿ ಪತ್ತೆಹಚ್ಚಲು ಸಾಧ್ಯವಾಗಿದೆ. ಸ್ಥಳದಲ್ಲಿ ಪೊಲೀಸ್, ಕಂದಾಯ ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ಕಳೆದ ಮೂರು ದಿನಗಳಿಂದ ಬೀಡುಬಿಟ್ಟಿದ್ದರು.

Also Read  ದಂತ ಚಿಕಿತ್ಸೆಗಿದು ಸಮಯವಲ್ಲ!!!

 

error: Content is protected !!
Scroll to Top