(ನ್ಯೂಸ್ ಕಡಬ) newskadaba. com ಬೆಳ್ತಂಗಡಿ, ಜು. 11. ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಮೈರೊಳ್ದಡ್ಕ ಸಮೀಪದ ಅಂಡೆಗೇರಿ ರಸ್ತೆಯು ಬೃಹತ್ ನೀರಿನ ಹೊಂಡಗಳಿಂದಾಗಿ ಈಜು ಕೊಳದಂತಾಗಿದ್ದು, ಜನ ಸಂಚಾರಕ್ಕೆ ಸಂಪೂರ್ಣ ಅಯೋಗ್ಯವಾಗಿದೆ.
ಸಮರ್ಪಕ ಚರಂಡಿಗೆ ವ್ಯವಸ್ಥೆಯಿಲ್ಲದೇ ಕೆಸರು ನೀರೆಲ್ಲ ರಸ್ತೆಯಲ್ಲೇ ನಿಂತು ಸರಕಾರಕ್ಕೆ ಯಾವುದೇ ಖರ್ಚಿಲ್ಲದೆ ಇಂಗು ಗುಂಡಿ ನಿರ್ಮಾಣವಾದಂತಿದೆ.
ಸುಮಾರು 40ಕ್ಕೂ ಅಧಿಕ ಮನೆಯವರು ಈ ರಸ್ತೆಯ ಫಲಾನುಭವಿಗಳಾಗಿದ್ದು, ರಸ್ತೆಯಲ್ಲಿ ನಡೆದುಕೊಂಡು ಹೋಗುವುದು ಬಿಡಿ, ಟಯರುಗಳೆಲ್ಲ ಮಣ್ಣಲ್ಲಿ ಹೂತುಹೋಗಿ ವಾಹನ ಸಂಚಾರಕ್ಕೂ ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. “ಇನ್ನು ವಿದ್ಯೆ ಕಲಿಯಲೆಂದು ತೆರಳುವ ಪುಟಾಣಿ ಮಕ್ಕಳಿಂದ ಕಾಲೇಜಿನ ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ನಡೆದುಕೊಂಡು ಹೋಗಲು ಪರದಾಡುವ ಸ್ಥಿತಿ ಹೇಳಿತೀರದ್ದು. ಶಾಲಾ ಕಾಲೆಜಿಗೆ ಈ ರಸ್ತೆಯಿಂದ ವಿದ್ಯಾರ್ಥಿಗಳು ತೆರಳುವುದೇ ಒಂದು ಸಾಧನೆಯಂತಾಗಿದೆ. ವಿಧ್ಯಾರ್ಥಿಗಳು ನಡೆದಾಡುವುದೇ ಕಷ್ಟಕರವಾಗಿದೆ”. ಹಲವು ಬಾರಿ ಸಂಬಂಧಪಟ್ಟವರಿಗೆ ಈ ರಸ್ತೆ ಸರಿಪಡಿಸುವ ಬಗ್ಗೆ ಮನವಿಗಳನ್ನು ನೀಡಿದರು ಕೂಡಾ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಬಂದಾರು ಪಂಚಾಯತಿನ ಆಡಳಿತಾಧಿಕಾರಿ ಹಾಗೂ ಪಿಡಿಒರವರೇ ದಯವಿಟ್ಟು ಈ ರಸ್ತೆಯ ದಯನೀಯ ಅವಸ್ಥೆಯನ್ನು ಮನಗಂಡು ಶೀಘ್ರವಾಗಿ ದುರಸ್ಥಿ ಕಾರ್ಯವನ್ನು ಕೈಗೊಳ್ಳಬೇಕೆಂದು, ಅಂಡೆಗೇರಿ ರಸ್ತೆ ಫಲಾನುಭವಿ ನಾಗರಿಕರ ಹಿತದೃಷ್ಠಿಯಿಂದ ಅವರ ಪರವಾಗಿ ಕೈಮುಗಿದು ಬೇಡಿಕೊಳ್ಳುತ್ತಿದ್ದೇವೆ.
ವರದಿ:- ✍️. ಎಸ್. ರಿಯಾಜ್, ಅಂಡಗೇರಿಯ ಹಿತೈಶಿ